
Sidlaghatta : ಶಿಡ್ಲಘಟ್ಟ ನಗರದಲ್ಲಿನ ಕುರುಬರಪೇಟೆಯ (Kurubarapete) ವಾಸಿ ಮಂಜುನಾಥ್(30) Acid ಕುಡಿದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ KK ಪೇಟೆಯ ಅವರ ಮನೆಯಲ್ಲಿ ಭಾನುವಾರ ನಡೆದಿದೆ.
ಕೆಲಸ, ಸಂಪಾದನೆ, ಮನೆ ಅಭಿವೃದ್ದಿ ಕುರಿತು ಮಂಜುನಾಥ ನ ಹೆತ್ತವರು ಹಾಗೂ ಅಕ್ಕ-ತಂಗಿಯರು ಬುದ್ದಿವಾದ ಹೇಳಿದ್ದಕ್ಕೆ ಮಂಜುನಾಥ್ ಬೇಸರಪಟ್ಟು ಆಸಿಡ್ ಸೇವಿಸಿದ್ದ ಎನ್ನಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದಾಗ ಆಸಿಡ್ ಕುಡಿದಿದ್ದು ತೀವ್ರವಾಗಿ ಅಸ್ವಸ್ಥನಾಗಿದ್ದ ಮಂಜುನಾಥನನ್ನು ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮದ್ಯೆದಲ್ಲೆ ಉಸಿರು ಚೆಲ್ಲಿದ್ದ ಎನ್ನಲಾಗಿದೆ.
ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದು, ಶಿಡ್ಲಘಟ್ಟ ನಗರಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur