Chikkaballapur : ಹತ್ತನೇ ತರಗತಿಯ (SSLC) ಕನ್ನಡ ಭಾಷಾ (Kannada Language) ವಿಷಯದಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರ ತಾಲ್ಲೂಕು ಕಸಾಪದಿಂದ (kasapa) ಸೋಮವಾರ ಚಿಕ್ಕಬಳ್ಳಾಪುರ ನಗರದ ನಂದಿ ರಂಗಮಂದಿರದ ಕಸಾಪ ಕಚೇರಿಯಲ್ಲಿ ಪ್ರತಿಭಾ ಪುರಸ್ಕಾರ ( ನಡೆಯಿತು.
ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ. ಕೋಡಿರಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು ಮತ್ತ ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಅಧ್ಯಕ್ಷತೆವಹಿಸಿದ್ದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಂಕ್ಷಿಪ್ತ ನಿಘಂಟು ಮತ್ತು ಪುಸ್ತಕ ಮತ್ತು ಅಭಿನಂದನಾ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಾ.ಮು. ಚಲಪತಿಗೌಡ “ಮಾತೃ ಭಾಷೆಯಲ್ಲಿ ವ್ಯಾಸಂಗ ಮಾಡಿದರೆ ಬೌದ್ಧಿಕ ಶಕ್ತಿ ಹೆಚ್ಚುತ್ತದೆ ಅನುವುದಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಅವರು ನಮ್ಮ ಕಣ್ಣುಮುಂದಿರುವ ಬಹು ದೊಡ್ಡ ಉದಾಹರಣೆ. ಐ.ಎ.ಎಸ್ ನಂತಹ ದೊಡ್ಡ ಪರೀಕ್ಷಗಳನ್ನೇ ಕನ್ನಡ ಮಾಧ್ಯಮದಲ್ಲಿ ಬರೆದ ಎಷ್ಟೋ ಮಂದಿ ಉನ್ನತ ಸ್ಥಾನ ಪಡೆದಿದ್ದಾರೆ” ಎಂದು ತಿಳಿಸಿದರು.
ತಾಲ್ಲೂಕು ಕಸಾಪ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ, ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ ಟಿ.ವಿ.ಚಂದ್ರಶೇಖರ್, ಶಿಕ್ಷಕರಾದ ಗೋಪಾಲಕೃಷ್ಣ, ಸಾಹಿತಿ ಸರಸಮ್ಮ, ಪದಾಧಿಕಾರಿಗಳಾದ ಡಿ.ಎಂ.ಶ್ರೀರಾಮ, ವಿ.ಮಂಜುನಾಥ್, ಅಡ್ಡಗಲ್ ಅನಿಲ್, ಮಹಾಂತೇಶ್, ಪ್ರೇಮಲೀಲಾ ವೆಂಕಟೇಶ್, ಸುಶೀಲಾ ಮಂಜುನಾಥ್, ರವಿಕುಮಾರ್, ಶಶಿಕಲಾ ,ಅನುಪಮಾ, ಗೀತಾ, ಕೆ.ಎಂ.ಕಾವ್ಯ, ಅಣ್ಣಮ್ಮ ಮತ್ತಿತರರು ಉಪಸ್ಥಿತರಿದ್ದರು.