Home Sidlaghatta ಸುಗಟೂರು ಸರ್ಕಾರಿ ಶಾಲೆಗೆ “ಸ್ವಚ್ಛ ವಿದ್ಯಾಲಯ ಪುರಸ್ಕಾರ್” ಪ್ರಶಸ್ತಿ

ಸುಗಟೂರು ಸರ್ಕಾರಿ ಶಾಲೆಗೆ “ಸ್ವಚ್ಛ ವಿದ್ಯಾಲಯ ಪುರಸ್ಕಾರ್” ಪ್ರಶಸ್ತಿ

0

Sugaturu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ (Jangamakote) ಕ್ಲಸ್ಟರ್ ವ್ಯಾಪ್ತಿಯ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (Sugaturu Government Higher Primary School) ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡುವ ಸ್ವಚ್ಚ ವಿದ್ಯಾಲಯ ಪುರಸ್ಕಾರ್ (Swachh Vidyalaya Puraskar) ಜಿಲ್ಲಾಮಟ್ಟದ ಪ್ರಶಸ್ತಿಗೆ ಭಾಜನವಾಗಿದ್ದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದೆ.

ಸ್ವಚ್ಚವಿದ್ಯಾಲಯ ಪುರಸ್ಕಾರ್‌ಗೆ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು ನೊಂದಾಯಿಸಿಕೊಳ್ಳುವಂತೆ ಕಳೆದ ಸಾಲಿನಲ್ಲಿ ಸೂಚಿಸಲಾಗಿತ್ತು. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1831 ಶಾಲೆಗಳು ನೋಂದಾಯಿಸಿಡಿದ್ದವು. ಅವುಗಳಲ್ಲಿ 1230 ಶಾಲೆಗಳು ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಹತೆ ಪಡೆದುಕೊಂಡಿದ್ದವು. ಶಿಡ್ಲಘಟ್ಟ ತಾಲ್ಲೂಕಿನಲ್ಲಿನ 362 ಶಾಲೆಗಳ ಪೈಕಿ 282 ನೊಂದಾಯಿಸಿಕೊಂಡು 205 ಶಾಲೆಗಳು ಅರ್ಹತೆ ಪಡೆದುಕೊಂಡಿದ್ದವು. ಅಗತ್ಯ ನೀರಿನ ಸೌಲಭ್ಯ, ಶೌಚಾಲಯ ನಿರ್ವಹಣೆ ಮತ್ತಿತರ ಮಾನಕಗಳಡಿ ಶಾಲೆಗಳನ್ನು ವಿಂಗಡಿಸಲಾಗಿತ್ತು.

ತಾಲ್ಲೂಕು ಹಂತದಲ್ಲಿ ಸಿಆರ್‌ಪಿಗಳ ತಂಡ ಮತ್ತು ಜಿಲ್ಲಾ ಹಂತದ ಅಧಿಕಾರಿಗಳ ತಂಡಗಳು ಖುದ್ದು ಭೇಟಿನೀಡಿ, ಮಾನಕಗಳಿಗೆ ಶಾಲೆಗಳು ಸಲ್ಲಿಸಿದ ದಾಖಲೆಗಳು ಮತ್ತು ವಸ್ತುಸ್ಥಿತಿಯನ್ನು ಪರಿಶೀಲಿಸಿ ದಾಖಲೆಗಳೊಂದಿಗೆ ವರದಿ ಸಲ್ಲಿಸಿದ್ದವು. ನಂತರ ಜಿಲ್ಲಾಧಿಕಾರಿ, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು, ಎಸ್‌ಎಸ್‌ಕೆ ಅಧಿಕಾರಿಗಳ ನೇತೃತ್ವದ ಸಮಿತಿಯು ಜಿಲ್ಲೆಯ 38 ಶಾಲೆಗಳನ್ನು ಮೂರು ವಿಭಾಗಗಳಲ್ಲಿ ಸ್ವಚ್ಛವಿದ್ಯಾಲಯ ಪುರಸ್ಕಾರ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲೆಯಲ್ಲಿಯೇ ಅತ್ಯಧಿಕ 103.5 ಅಂಶಗಳನ್ನು ಪಡೆದು ಪ್ರಶಸ್ತಿಗೆ ಭಾಜನವಾಗಿದೆ.

ಮೂರು ಶಾಲೆಗಳು ಆಯ್ಕೆ: ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸುಂಡ್ರಹಳ್ಳಿಯ ಇಂದಿರಾಗಾಂಧಿ ವಸತಿಶಾಲೆಗಳು ಸೋಪ್ ಬಳಸಿ ಕೈತೊಳೆಯುವ ವಿಧಾನ ಉಪವಿಭಾಗದಲ್ಲಿ ಶೇ 100, ಜಂಗಮಕೋಟೆಯ ಶ್ರೀ ಜ್ಯೋತಿ ಪ್ರೌಢಶಾಲೆಯು ಕೋವಿಡ್-19 ಸಿದ್ಧತೆ ಮತ್ತು ನಿರ್ವಹಣೆ ಉಪವಿಭಾಗದಲ್ಲಿ ಶೇ 100 ಸಾಧನೆ ಮಾಡಿ ಪ್ರಶಸ್ತಿಯನ್ನು ಪಡೆದುಕೊಂಡಿವೆ.

ಪ್ರಶಸ್ತಿ ಪ್ರಧಾನ : ಚಿಕ್ಕಬಳ್ಳಾಪುರ ನಗರದ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಸ್ವಚ್ಛ ವಿದ್ಯಾಲಯ ಪುರಸ್ಕಾರ್ ಪ್ರಶಸ್ತಿಗೆ ಭಾಜನವಾದ 38 ಶಾಲೆಗಳಿಗೆ ಉಪನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ಎಸ್‌ಎಸ್‌ಕೆ ಉಪಯೋಜನಾಧಿಕಾರಿ ಸುಭಾಶ್‌ಚಂದ್ರಭೋಸ್, ಶ್ರೀನಿವಾಸ್, ಉಪನಿರ್ದೇಶಕರ ಕಚೇರಿಯ ವಿಷಯಪರಿವೀಕ್ಷಕರಾದ ಜಮೀಲ್‌ಪಾಶಾ, ರಾಘವೇಂದ್ರ, ಪ್ರಶಸ್ತಿಗಳನ್ನು ವಿತರಿಸಿದರು. ತಾಲ್ಲೂಕು ಬಿಆರ್‌ಸಿ ಸಂಯೋಜಕ ತ್ಯಾಗರಾಜು, ನೋಡಲ್ ಅಧಿಕಾರಿ ಬಿಆರ್‌ಪಿ ಲಕ್ಷ್ಮಿನಾರಾಯಣ್, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಮೂರ್ತಪ್ಪ, ಮುಖ್ಯಶಿಕ್ಷಕಿ ಹೇಮಲತಾ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

error: Content is protected !!
Exit mobile version