ಚಿಕ್ಕಬಳ್ಳಾಪುರ
Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಭಾನುವಾರ ಶಾಂತಿಯುತವಾಗಿ ನಡೆಯಿತು. ಒಕ್ಕಲಿಗ ಸಮುದಾಯದ ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಮೂರು ಸ್ಥಾನಗಳು ಮೀಸಲಿದ್ದು ಒಟ್ಟು 12 ಮಂದಿ ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಯಲುವಳ್ಳಿ ರಮೇಶ್, ಟಿ.ಕೋನಪ್ಪ ರೆಡ್ಡಿ, ಎಂ.ಪ್ರಕಾಶ್ ಸ್ಪರ್ಧಿಸಿದ್ದು, ಕೋಲಾರ ಜಿಲ್ಲೆಯ 9 ಮಂದಿ ಡಾ.ಡಿ.ಕೆ. ರಮೇಶ್, ಟಿ.ಎಸ್.ಅಂಜಿನಪ್ಪ, ಈಶ್ವರರೆಡ್ಡಿ, ಪರಮೇಶ್, ರಘುನಾಥರೆಡ್ಡಿ, ಬಿ.ಆರ್.ಲಕ್ಷ್ಮಣ, ಸೊಣ್ಣಪ್ಪ, ವಿ.ರಮೇಶ್ ಬಾಬು, ಕೆ.ಎಸ್.ವೇಣುಗೋಪಾಲ್ ಕಣದಲ್ಲಿದ್ದರು.
ಚಿಕ್ಕಬಳ್ಳಾಪುರ ತಾಲೂಕಿನ್ಯಾದ್ಯಂತ 10205 ಮತದಾರರ ಪೈಕಿ 7437 ಮತದಾರರು ಚಿಕ್ಕಬಳ್ಳಾಪುರದ ಜೂನಿಯರ್ ಕಾಲೇಜು ಆವರಣದಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ಹಕ್ಕನ್ನು ಚಲಾಯಿಸಿದರು.
ಚಿಂತಾಮಣಿ
Chintamani : ಚಿಂತಾಮಣಿ ನಗರದ ಚೇಳೂರು ರಸ್ತೆಯ ವಿಕ್ರಂ ವಿದ್ಯಾಸಂಸ್ಥೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತಾಲ್ಲೂಕಿನ್ಯಾದ್ಯಂತ 10207 ಮತದಾರರು ಇದ್ದು 8022 ಮಂದಿ ಮತದಾನ ಮಾಡಿದರು.
ಶಿಡ್ಲಘಟ್ಟ
Sidlaghatta : ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಶಿಡ್ಲಘಟ್ಟ ತಾಲೂಕಿನಲ್ಲಿ 11,130 ಮತದಾರರ ಪೈಕಿ 7,890 ಮಂದಿ ನಗರ ಹೊರವಲಯದ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಬಾಗೇಪಲ್ಲಿ
Bagepalli : ಬಾಗೇಪಲ್ಲಿ ತಾಲೂಕಿನಲ್ಲಿ . ಶೇ 79.10ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯಾಗಿ ವೆಂಕಟೇಶಪ್ಪ, ಸಹ ಚುನಾವಣಾಧಿಕಾರಿ ಓಬಳೇಶ ತಿಳಿಸಿದರು. ತಾಲೂಕಿನ್ಯಾದ್ಯಂತ 3,800 ಮತದಾರರ ಪೈಕಿ 3006 ಮತದಾರರು ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾವರಣದ 8 ಮತಕೇಂದ್ರಗಳಲ್ಲಿ ಹಕ್ಕನ್ನು ಚಲಾಯಿಸಿದ್ದಾರೆ.
ಗುಡಿಬಂಡೆ
Gudibande : ಗುಡಿಬಂಡೆಯ ತಾಲೂಕಿನಾದ್ಯಂತ 1,288 ಮತಗಳಿದ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಮಾತೆಗಟ್ಟೆಯಲ್ಲಿ 1,092 ಮತಗಳು ಚಲಾವಣೆಯಾಗಿದೆ.
ಗೌರಿಬಿದನೂರು
Gauribidanur : ಗೌರಿಬಿದನೂರು ತಾಲೂಕಿನ್ಯಾದ್ಯಂತ 1448 ಮತದಾರರ ಪೈಕಿ 1041 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.
ಫಲಿತಾಂಶ
ಡಿಸೆಂಬರ್ 15 ರಂದು ಕೋಲಾರದಲ್ಲಿ ಮತ ಎಣಿಕೆ ನಡೆಯಲಿದೆ.