Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಕೇತೇನಹಳ್ಳಿಯ ಯೋಗಿನಾರೇಯಣ ತಾತಯ್ಯ ಅವರ ದೇವಾಲಯದಲ್ಲಿ (Yogi Nareyana Tatayya Temple) ಯೋಗಿನಾರೇಯಣ ತಾತಯ್ಯ ಹಾಗೂ ಲಕ್ಷ್ಮಿನಾರಾಯಣಸ್ವಾಮಿ (Lakshminarayanaswamy) ಪ್ರತಿಷ್ಠಾಪನಾ ಮಹೋತ್ಸವ ಭಾನುವಾರ ನಡೆಯಿತು.
ದೇಗುಲ ಸಮಿತಿಯ ಕೃಷ್ಣಪ್ಪ ಮಾತಾನಾಡಿ “ಕೈವಾರ ತಾತಯ್ಯ ಹಾಗೂ ಲಕ್ಷ್ಮಿನಾರಾಯಣಸ್ವಾಮಿ ಅವರ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆದಿದ್ದು ಇಲ್ಲಿ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿ” ಎಂದು ಆಶಿಸಿದರು.
ಭಾನುವಾರ ಬೆಳಿಗ್ಗೆಯಿಂದ ಪೀಠನ್ಯಾಸ, ಬಿಂಬ ಪ್ರತಿಷ್ಠೆ, ಕಳಾನ್ಯಾಸ, ಕಳಾಹೋಮ, ನೇತ್ರೋನ್ಮಿಲನ, ನವಗ್ರಹ, ಅಷ್ಟದಿಕ್ಪಾಲರ ಹೋಮಗಳು ಪ್ರಾಣಪ್ರತಿಷ್ಠೆ, ದರ್ಪಣದೀಪ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur