Home Sidlaghatta ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ

ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ

0

Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಕೆ.ಎಸ್.ಟಿ.ಡಿ.ಸಿ ಹಾಗೂ ಸರ್ಕಾರದ ಮಾರ್ಗಸೂಚಿ ಅನ್ವಯ 2022-23 ನೇ ಸಾಲಿನ ಐದು ದಿನಗಳ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಕ್ಷಣ ಸಂಯೋಜಕ ಭಾಸ್ಕರಗೌಡ ಅವರು ಮಾತನಾಡಿದರು.

ಪ್ರವಾಸದಿಂದ ಮಕ್ಕಳು ಇತಿಹಾಸದ ಕುರಿತು ಜ್ಞಾನ ವೃದ್ಧಿಸಿಕೊಳ್ಳಬೇಕು. ಪ್ರವಾಸದ ಸಂದರ್ಭದಲ್ಲಿ ಸುರಕ್ಷತೆಯಿಂದ ಇದ್ದು, ಶಿಕ್ಷಕರ ಮಾರ್ಗದರ್ಶನದಲ್ಲಿ ಇರಬೇಕು ಎಂದು ತಿಳಿಸಿದರು.

ಪ್ರವಾಸಿ ತಾಣದಲ್ಲಿ ವಿದ್ಯಾರ್ಥಿಗಳು ಒಬ್ಬೊಬ್ಬರೆ ಸುತ್ತಾಡದೇ ಸುರಕ್ಷಿತವಾಗಿ ಪ್ರವಾಸವನ್ನು ಮುಗಿಸಿಕೊಳ್ಳಬೇಕು. ಮಕ್ಕಳ ಪಾಲಕರು ದಿನವೂ ಸಂಜೆಯ ಹೊತ್ತು ಶಿಕ್ಷಕರಿಗೆ ಕರೆ ಮಾಡುವ ಮೂಲಕ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತಿರಬೇಕು ಎಂದರು.

ತಾಲ್ಲೂಕಿನ 10 ಸರ್ಕಾರಿ ಶಾಲೆಗಳ ಎಂಟನೇ ತರಗತಿಯ 46 ಮಂದಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಮೊದಲನೇ ದಿನ ಚಿತ್ರದುರ್ಗ, ಟಿ.ಬಿ.ಡ್ಯಾಮ್, ಎರಡನೇ ದಿನ ಹಂಪಿ ದರ್ಶನ, ಮೂರನೇ ದಿನ ಬಿಜಾಪುರ ಮತ್ತು ಐಹೊಳೆ, ನಾಲ್ಕನೇ ದಿನ ಪಟ್ಟದಕಲ್ಲು ಮತ್ತು ಬಾದಾಮಿ ನೋಡಿಕೊಂಡು ಐದನೇ ದಿನ ಹಿಂದಿರುಗುವರು ಎಂದು ಹೇಳಿದರು.

ನೋಟ್‌ಬುಕ್, ಟಿ.ಶರ್ಟ್, ಟೋಪಿ, ಪೆನ್ನು ಹಾಗೂ ಕರ್ನಾಟಕದ ನಕಾಶೆಯಿರುವ ಬ್ಯಾಗ್ ಇರುವ ಪ್ರವಾಸದ ಕಿಟ್ ಮಕ್ಕಳಿಗೆ ವಿತರಿಸಲಾಯಿತು.


Karnataka Darshan Tour Program for Children Inaugurated

Sidlaghatta : Education Coordinator Bhaskar Gowda inaugurated the five-day Karnataka Darshan tour program for the year 2022-23 on Monday at the Sidlaghatta Town Government High School. The program aims to provide students with a hands-on experience of history and culture in the state. The guidelines of KSTDC and the government were followed to ensure the safety of the students during the tour.

Mr. Gowda emphasized the importance of children gaining knowledge about history by experiencing it firsthand. He advised that the students should be under the guidance of teachers at all times during the trip to ensure their safety. Parents were also urged to call the teachers every evening to inquire about their children’s welfare.

A total of 46 backward class and minority students in Class VIII from 10 government schools in the taluk will benefit from this program. The students will visit various historical and cultural sites over five days, including Chitradurga and TB Dam on the first day, Hampi Darshan on the second day, Bijapur and Aihole on the third day, Pattadakallu and Badami on the fourth day, and return on the fifth day.

To help the students during their tour, they were given a travel kit containing a notebook, T-shirt, cap, pen, and a bag with a map of Karnataka. The program hopes to instill a love for history and culture in the students and encourage them to learn more about their state.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version