- Advertisement -
- Advertisement -
- Advertisement -
- Advertisement -
Chintamani : ನವಜಾತ ಹೆಣ್ಣು ಮಗುವನ್ನು ಯಾರೋ ಅನಾಥವಾಗಿ ಚಿಂತಾಮಣಿ ನಗರದ ಬೆಂಗಳೂರು ರಸ್ತೆಯ ಯಾದವ ವಿದ್ಯಾರ್ಥಿನಿಲಯದ ಬಳಿ
ಬಿಟ್ಟು ಹೋಗಿರುವ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.
ಸಂಜೆ ಹೊಲದಿಂದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಕನಂಪಲ್ಲಿಯ ಲಕ್ಷ್ಮಿದೇವಿ ಮತ್ತು ಆಕೆಯ ಸಹೋದರ ಶ್ರೀನಿವಾಸರೆಡ್ಡಿ ಮಗು ಅಳುವ ಶಬ್ದ ಕೇಳಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಅಧಿಕಾರಿಗಳು ಕೂಡಲೇ ಮಗುವನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಗು ಆರೋಗ್ಯವಾಗಿದ್ದು ಚಿಕ್ಕಬಳ್ಳಾಪುರದ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
For Daily Updates WhatsApp ‘HI’ to 7406303366
- Advertisement -