Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಭಾನುವಾರ ಜೈ ಭೀಮ್ ನಗರದಲ್ಲಿರುವ ಮೇಲ್ ಮರವತ್ತೂರ್ (Melmaruvathur) ಆದಿಪರಾಶಕ್ತಿ ದೇವತೆಯ (Adhiparasakthi Siddhar Peetam) ಮೂರನೇ ವರ್ಷದ ಅಡಿಪೂರ ಗಂಜಿ ಮಹೋತ್ಸವ (Ganji Pooja) ಸಂಭ್ರಮದಿಂದ ನಡೆಯಿತು. ಅನೇಕ ಮಹಿಳೆಯರು ಗಂಜಿ ಕರಗದ ಮೂಲಕ ವಿಶೇಷ ಪೂಜೆ ಸಲ್ಲಿಸಿ ತಲೆಯ ಮೇಲೆ ಮಡಿಕೆ ಇಟ್ಟುಕೊಂಡು ಕಿ.ಮೀ.ಗಟ್ಟಲೇ ಕಾಲ್ನಡಿಗೆಯಲ್ಲಿ ಸಾಗಿದರು.
ಅಖಿಲ ಕರ್ನಾಟಕ ಓಂಶಕ್ತಿ ಕನ್ನಡ ವೇದಿಕೆ ಸಹಕಾರದಲ್ಲಿ ಭಕ್ತ ಮಂಡಳಿಯಿಂದ ನಡೆದ ಕಾರ್ಯಕ್ರಮದಲ್ಲಿ ಆದಿ ಪರಾಶಕ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿಶ್ವಶಾಂತಿ ಮತ್ತು ಉತ್ತಮ ಮಳೆ ಬೆಳೆಯಾಗಲಿ ಎಂದು ತಮಿಳುನಾಡಿನ ಮೇಲ್‌ಮರುವತ್ತೂರಿನ ಆದಿಪರಾಶಕ್ತಿ (ಓಂಶಕ್ತಿ) ಭಕ್ತರು ವಿಜೃಂಭಣೆಯಿಂದ ಮೂರನೇ ವರ್ಷದ ಗಂಜಿ ಮಹೋತ್ಸವ ಹಾಗೂ ಕಳಸ ದೀಪ ಯಾಗ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಸಿದರು.
ದೇವಸ್ಥಾನ ಸಮಿತಿಯ ವ್ಯವಸ್ಥಾಪಕ ಎಂ.ವೆಂಕಟೇಶ್, ಮನೋಹರ್, ಕೆ.ವಿ.ವೆಂಕಟರತ್ನಮ್ಮಮತ್ತಿತರರು ಉಪಸ್ಥಿತರಿದ್ದರು