Chikkaballapur : ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ಸೌಲಭ್ಯ ಕಲ್ಪಿಸಲು ಲೆವೆಲ್ಲರ್, ರೋಟೋವೇಟರ್, ಕಲ್ಟಿವೇಟರ್, ಎಂ.ಬಿ.ನೇಗಿಲು, ಫರೋ ಓಪನರ್, ಪವರ್ ಟಿಲ್ಲರ್, ಮಿನಿ ಟ್ರ್ಯಾಕ್ಟರ್ ಮತ್ತು ಅಂತರ ಬೇಸಾಯ ಉಪಕರಣಗಳಾದ ಪವರ್‌ವೀಡರ್, ಬ್ರಷ್‌ಕಟ್ಟರ್, ಕೃಷಿ ಉತ್ಪನ್ನ ಸಂಸ್ಕರಣ ಯೋಜನೆಯಡಿ ಸಂಸ್ಕರಣಾ ಘಟಕಗಳಾದ ದಾಲ್ ಪ್ರೊಸಸರ್, ಪಲ್ವರೈಸರ್, ಪ್ಲೋರ್ ಮಿಲ್, ಬಹು ಬೆಳೆ ಒಕ್ಕಣೆಯಂತ್ರ, ಕೊಕೊನಟ್ ಫ್ರಾಂಡ್ ಚಾಫರ್, ಚಾಪ್ ಕಟ್ಟರ್ ಮತ್ತು ಸ್ವಯಂ ಚಾಲಿತ ಎಣ್ಣೆಗಾಣಗಳನ್ನು ಸಾಮಾನ್ಯ ರೈತರಿಗೆ ಶೇ 50ರಷ್ಟು, ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ಶೇ 90ರಷ್ಟು ಸಹಾಯಧನದಲ್ಲಿ ಕಾರ್ಯಕ್ರಮಕ್ಕೆ ಅನುಗುಣವಾಗಿ ವಿತರಿಸಲು ಅವಕಾಶವಿದೆ.
ಈ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ರೈತರು ಸಂಬಂಧ ಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ಅರ್ಜಿ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯೊಂದಿಗೆ ಪಹಣಿ, ಪಾಸ್‌ಪೋರ್ಟ್ ಪೋಟೋ, ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ನೀಡಬೇಕು. ಸೌಲಭ್ಯ ಪಡೆಯಲು ಇಚ್ಚಿಸುವ ರೈತರು ಮೇಲಿನ ಎಲ್ಲಾ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಕೆ-ಕಿಸಾನ್ Fruits ತಂತ್ರಾಂಶದಲ್ಲಿ ನಮೂದಿಸುವುದು ಕಡ್ಡಾಯವಾಗಿದ್ದು, ಜೇಷ್ಠತೆ ಪಟ್ಟಿಯ ಆಧಾರದ ಮೇಲೆ ರೈತರು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.