Bagepalli : CPM ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಮುಖಂಡರು ಬುಧವಾರ ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನದಿಂದ ಮೆರವಣಿಗೆ ಹೊರಟು ಅಂಬೇಡ್ಕರ್ (Dr. B.R. Ambedkar) ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗಣರಾಜ್ಯೋತ್ಸವದಲ್ಲಿ ಉದ್ಧಟತನ ಪ್ರದರ್ಶಿಸಿದ್ದ ಮಲ್ಲಿಕಾರ್ಜುನ ಗೌಡ ಭಾರತ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಇಂತಹ ಜಾತಿವಾದಿ, ಕೋಮುವಾದಿ ಮನಸ್ಸುಗಳು ನ್ಯಾಯಾಲಯಗಳಲ್ಲಿ ಇರುವುದು ಅಪಾಯಕಾರಿ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಡಾ.ಅನಿಲ್ ಕುಮಾರ್, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯೆ ಸಾವಿತ್ರಮ್ಮ, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯೆ ಸಾವಿತ್ರಮ್ಮ, ನಗರ ಸಮಿತಿ ಕಾರ್ಯದರ್ಶಿ ಅಶ್ವಥ್ಥಪ್ಪ, ಮುಖಂಡರಾದ ವೆಂಕಟರಾಮ್, ರಾಮಪ್ಪ, ಜೀವಿಕಾ ಸಂಘಟನೆಯ ಮುಖಂಡರಾದ ಜ್ಯೋತಿ, ಗಂಗಾ, ಲಕ್ಷ್ಮಣ, ವೆಂಕಟರಾಮರೆಡ್ಡಿ ಪಾಲ್ಗೊಂಡಿದ್ದರು.
ಬಾಗೇಪಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡರು ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ. ವೆಂಕಟರವಣ, ತಾಲ್ಲೂಕು ಸಂಚಾಲಕ ಪೈಪಾಳ್ಯ ರವಿ, ಸಂಘಟನಾ ಸಂಚಾಲಕ ಎಲ್.ಎನ್. ನರಸಿಂಹಯ್ಯ, ಮುಖಂಡರಾದ ವಿ. ಗಂಗುಲಪ್ಪ, ಎಚ್.ಎನ್. ಗೋಪಿ, ಡಿ.ಕೆ. ರಮೇಶ್, ಪಿ. ನಾಗಪ್ಪ, ಗಂಗಾಧರ, ಪ್ರಕಾಶ್, ಕೆ. ನರಸಿಂಹಯ್ಯ, ಸತೀಶ, ನಂಜುಂಡಪ್ಪ, ಸೂರ್ಯನಾರಾಯಣ, ಮಂಜುನಾಥ್, ಶ್ರೀನಿವಾಸ್, ಸೀನಪ್ಪ, ನರಸಿಂಹಪ್ಪ ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur