Bagepalli : ಸ್ವಾತಂತ್ರ್ಯದ ಅಮೃತ ಮಹೋತ್ಸವದ (Azadi Ka Amrut Mahotsav) ಅಂಗವಾಗಿ ಭಾನುವಾರ ಬಾಗೇಪಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಬಿಜೆಪಿ ಮುಖಂಡ ಸಿ.ಮುನಿರಾಜು ನೇತೃತ್ವದಲ್ಲಿ ಬೈಕ್ ರ‍್ಯಾಲಿ (Bike Rally) ಹಮ್ಮಿಕೊಳ್ಳಾಲಾಗಿತ್ತು. ಬಾಗೇಪಲ್ಲಿ ಪಟ್ಟಣದ T. B ಕ್ರಾಸ್‌ನಲ್ಲಿ ತಿರಂಗ ಯಾತ್ರೆ (Tiranga Yatra) ಹಮ್ಮಿಕೊಳ್ಳಲಾಗಿತ್ತು ಸಾರ್ವಜನಿಕರು 1 Km ಉದ್ದದ ತಿರಂಗ ಧ್ವಜ (Indian Natonal Flag) ಹಿಡಿದು 5 Km ನಗರ ಪ್ರದಕ್ಷಿಣೆ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( K Sudhakar) “ಯುವಜನರು, ರೈತರು (Farmer) ಈ ದೇಶದ ಬೆನ್ನಲುಬಾಗಿದ್ದು ಜನರು ದೇಶದ ಗೌರವ ಹಾಗೂ ರಾಷ್ಟ್ರಭಕ್ತಿ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಬೈಕ್ ರ‍್ಯಾಲಿಯಲ್ಲಿ BJP ಮುಖಂಡ ಸಿ.ಮುನಿರಾಜು, ಬಿಜೆಪಿ ರಾಜ್ಯ ಯುವಘಟಕದ ಅಧ್ಯಕ್ಷ ಸಂದೀಪ್ ಕುಮಾರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೋಹಿತ್ ಚವ್ಹಾಣ್, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮಂಡಲ ಅಧ್ಯಕ್ಷ ಆರ್.ಪ್ರತಾಪ್, ವೆಂಕಟೇಶ್ ಮತ್ತೀತರರು ಉಪಸ್ಥಿತರಿದ್ದರು.