Bagepalli : ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ (Gadidam) ಬೆಟ್ಟದ ಮೇಲೆ ಶಣೈಶ್ವೇರ ದೇವಾಲಯಕ್ಕೆ ಸಂಚರಿಸುವ ಮಾರ್ಗದ ಮುಖ್ಯರಸ್ತೆಯಲ್ಲಿರುವ ಪಾಂಡುರಂಗ ರಥೋತ್ಸವ (Panduranga Rathotsava) ಭಾನುವಾರ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ದೇವರಿಗೆ ಹೂವಿನ ಅಲಂಕಾರ, ಮುಖ್ಯದ್ವಾರದ ಕಂಬಗಳಿಗೆ ಸೇರಿದಂತೆ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಫಲಪಂಚಾಮೃತ ಅಭಿಷೇಕ, ಗಣಪತಿ ಪೂಜೆ, ಗೋವುಪೂಜೆ, ಹೋಮ ಹವನ ನಡೆಯಿತು.
ಭಕ್ತರು ಸರತಿಸಾಲಿನಲ್ಲಿ ನಿಂತು ದೇವರಿಗೆ ನೈವೇದ್ಯ ಇಟ್ಟು ದರ್ಶನ ಪಡೆದರು.