Bagepalli : ಪಂಜಾಬ್‌ನಲ್ಲಿ ಪ್ರಧಾನಿಮಂತ್ರಿ ನರೇಂದ್ರಮೋದಿರವರಿಗೆ (Prime Minister Narendra Modi) ಭದ್ರತಾ ಲೋಪ (Security Lapse) ಆಗಿರುವ ಕ್ರಮ ಖಂಡಿಸಿ ಹಾಗೂ ಪಂಜಾಬ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ BJP ಪರಿಶಿಷ್ಟ ವರ್ಗಗಳ ಮೋರ್ಚಾದ ಬಿಜೆಪಿ ಮುಖಂಡರು ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂದೆ ಸೋಮವಾರ ಮೌನ ಪ್ರತಿಭಟನೆ ನಡೆಸಿದರು.
ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಮಾತನಾಡಿ “ಪಂಜಾಬ್ ಸರ್ಕಾರ ಪ್ರಧಾನಮಂತ್ರಿ ನರೇಂದ್ರಮೋದಿರವರಿಗೆ ಭದ್ರತೆಯಲ್ಲಿ ನೀಡುವಲ್ಲಿ ವಿಫಲವಾಗಿದೆ, ದೇಶದ ಪ್ರಧಾನಿಗೆ ಭದ್ರತೆ ಕಲ್ಪಿಸುವುದರಲ್ಲಿ ವಿಫಲಗೊಂಡು ಅವಮಾನಿಸಿದೆ. ಇದರಿಂದ ಬಿಜೆಪಿ ಎಸ್ ಟಿ ಮೋರ್ಚಾದ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂದೆ ಬಿಜೆಪಿ ಮುಖಂಡರು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಆರ್ ಪ್ರತಾಪ್, ಬಿಜೆಪಿ ಮುಖಂಡರಾದ ಮಹಿಳಾ ಕಾರ್ಯಕಾರಿಣಿ ಸದಸ್ಯೆ ನಿರ್ಮಲಮ್ಮ, ತಾಲ್ಲೂಕು ಮಹಿಳಾ ಮೋರ್ಚಾದ ಪ್ರಧಾನಕಾರ್ಯದರ್ಶಿ ಗಂಗುಲಮ್ಮ, ಮಂಜುಳಮ್ಮ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾಬಾಯಿ, ವನಜಮ್ಮ, ಲಕ್ಷ್ಮೀ, ಪ್ರಧಾನಕಾರ್ಯದರ್ಶಿ ಪ್ರಭಾಕರರೆಡ್ಡಿ, ಶಶಿಕುಮಾರ್, ರಂಗಾರೆಡ್ಡಿ, ದೇವರಾಜು, ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ವೆಂಕಟರವಣ, ಈಶ್ವರಪ್ಪ, ಶ್ರೀನಿವಾಸ್, ಸುರೇಶ್. ಎಸ್.ವಿ.ವೆಂಕಟರವಣ, ಶ್ರೀರಾಮ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.