Bagepalli : ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ರಾಜ್ಯಮಟ್ಟದ ಪಾಲಕರ, ಉತ್ಪನ್ನ ತಯಾಕರ ಸಮ್ಮೇಳನದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ದೇವಿಕುಂಟೆ ರೈತ ಗೋಪಾಲ್ ಅವರ 30 ವರ್ಷಗಳ ಗೋಸೇವೆ, ಸಾವಯುವ ಕೃಷಿಯನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.
ಮೂಲಸೌಲಭ್ಯಗಳಿಂದ ವಂಚಿತಗೊಂಡಿರುವ ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಕುಂಟೆ ಗ್ರಾಮ ಬೆಟ್ಟ-ಗುಡ್ಡಗಳಿಂದ ಕೂಡಿದೆ. ಮೇವಿನ ಕೊರತೆಯಿದ್ದರೂ ಹೊಲಗಳಲ್ಲಿ ಬೆಳೆದ ನೆಲಗಡಲೆ, ಮುಸಕಿನಜೋಳ, ರಾಗಿ, ಭತ್ತದ ಕಡ್ಡಿಗಳನ್ನು ಹಾಕಿ ವಿವಿಧ ತಳಿಯ ನಾಟಿಹಸುಗಳನ್ನು ರೈತ ಗೋಪಾಲ್ ಸಾಕುತ್ತಿದ್ದಾರೆ. ಇವರ ಸಾಧನೆಗೆ ಕೃಷ್ಣಮಠದ ಈಶಪ್ರಿಯ ತೀರ್ಥಪಾದರು, ಕೊಲ್ಹಾಪುರದ ಕನ್ನೇರಿ ಮಠದ ಕಾಡಸಿದ್ದೇಶ್ವರವರು ಪ್ರಶಸ್ತಿ ನಾಮಫಲಕ ನೀಡಿ ಗೌರವಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ರೈತ D.P. ಗೋಪಾಲ್ ” ನಾನು ಕಳೆದ 30 ವರ್ಷಗಳಿಂದ 35 ಗೋವುಗಳನ್ನು ಸಾಕುತ್ತಿದ್ದು 100 ಗೋವುಗಳನ್ನು ಸಾಕಬೇಕು ಎಂಬ ಗುರಿ ಹೊಂದ್ದಿದ್ದೇನೆ. ಆದರೆ ಆರ್ಥಿಕ ಸಂಕಷ್ಟ ಇದ್ದೂ ಮೇವಿನ ಹಾಗೂ ಕೊಟ್ಟಿಗೆಗಳ ಕೊರತೆ ಇದೆ. ಇದೀಗ ಗೋವುಗಳನ್ನು ರಸ್ತೆಗಳಲ್ಲಿ, ಖಾಲಿ ಜಾಗಗಳಲ್ಲಿ ಕಟ್ಟುತ್ತಿದ್ದೇನೆ. ಸಾವಯುವ ಕೃಷಿಯ ರೈತರಿಗೆ ಗೋವುಗಳನ್ನು ಉಳಿಸಿ, ಬೆಳಿಸಲು ಸರ್ಕಾರಗಳು ಸಾಲಸೌಲಭ್ಯ ನೀಡಬೇಕು’ ಎಂದು ತಿಳಿಸಿದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur