HomeBagepalliBagepalli ತಾಲ್ಲೂಕು ಮಟ್ಟದ ಆರೋಗ್ಯ ಮೇಳ

Bagepalli ತಾಲ್ಲೂಕು ಮಟ್ಟದ ಆರೋಗ್ಯ ಮೇಳ

- Advertisement -
- Advertisement -
- Advertisement -
- Advertisement -

Bagepalli : ಬಾಗೇಪಲ್ಲಿ ಪಟ್ಟಣದ ಶಾಂತಿನಿಕೇತನ ಶಾಲೆ (Shanitniketan school) ಆವರಣದಲ್ಲಿ ಭಾನುವಾರ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ (S N Subbareddy Charitable trust), ರೆಡ್ ಕ್ರಾಸ್ ಸಂಸ್ಥೆ (Red Cross Organization), ಸಾರ್ವಜನಿಕ ಆಸ್ಪತ್ರೆ (Government Hospital) ಸೇರಿದಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳ (Health Camp) ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S.N. SubbaReddy) ” ಇದುವರೆಗೆ 15 ಸಾವಿರಕ್ಕೂ ಹೆಚ್ಚು ಮಂದಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಆರೋಗ್ಯ ಚಿಕಿತ್ಸೆ ಕಲ್ಪಿಸಿ 8 ಸಾವಿರ ಮಂದಿಗೆ ಗರ್ಭಕೋಶ, ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಅಪಘಾತವಾಗಿ ಚಿಕಿತ್ಸೆ ಪಡೆಯುವವರು ಸೇರಿದಂತೆ ಮಹಿಳೆಯರು, ವೃದ್ಧರು ಅಗತ್ಯ ಚಿಕಿತ್ಸೆ ಮಾಡಿಸುವಂತೆ ಮನವಿ ಮಾಡಿದ್ದಾರೆ ಆದ್ದರಿಂದ ಜನರ ಆರೋಗ್ಯದ ಹಿತಾದೃಷ್ಟಿಯಿಂದ ಬಾಗೇಪಲ್ಲಿ ವಿಧಾನಸಭಾಕ್ಷೇತ್ರದ ಬಾಗೇಪಲ್ಲಿ, ಗುಡಿಬಂಡೆ (Gudibande) ಹಾಗೂ ಚೇಳೂರು (Chelur) ತಾಲ್ಲೂಕುಗಳ ಪ್ರತಿ ಹೋಬಳಿಗಳಲ್ಲಿ ಆರೋಗ್ಯ ಮೇಳ ಹಮ್ಮಿಕೊಂಡು, ಜನರಿಗೆ ಉಚಿತವಾಗಿ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಮಾಡಿಸಲಾಗುವುದು” ಎಂದು ತಿಳಿಸಿದರು.

ಆರೋಗ್ಯ ಮೇಳದಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ (Kidwai Memorial Institute of Oncology Cancer Research and Training Centre), ಇಂಡಿಯನ್ ಕ್ಯಾನ್ಸರ್ ಸೊಸೈಟಿ (Indian Cancer Society), ನಾರಾಯಣ ಹೃದಯಾಲಯ (Narayana Health), ಸಪ್ತಗಿರಿ ಆಸ್ಪತ್ರೆ (Sapthagiri Super Speciality Hospital), ಶಂಕರ ಕಣ್ಣಿನ ಆಸ್ಪತ್ರೆ (Sankara Eye Hospital), ಮುದ್ದೇನಹಳ್ಳಿ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆ (Sri Sathya sai sarala memorial hospital), ಭಾರತೀಯ ರೆಡ್‌ಕ್ರಾಸ್ ಸಂಸ್ಥೆ (Indian Red Cross Society), ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಆರೋಗ್ಯ ಸಿಬ್ಬಂದಿ, ಸಕ್ಕರೆ, ರಕ್ತದೊತ್ತಡ, ವೈದ್ಯಕೀಯ ತಪಾಸಣೆ, ಮೂಳೆ ಸಂಬಂಧಿತ, ಗರ್ಭಕೋಶ, ಕಣ್ಣಿನ ತಪಾಸಣೆ, ದಂತ ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ತಜ್ಞರಿಂದ ಸಮಾಲೋಚನೆ ಮಾಡಿದರು.

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಪದಾಧಿಕಾರಿಗಳಾದ ಡಾ.ಕೋಡಿರಂಗಪ್ಪ, ಜಯರಾಂ, ತಾಲ್ಲೂಕು ಕಾರ್ಯದರ್ಶಿ ಎ.ಜಿ.ಸುಧಾಕರ್, ತಹಶೀಲ್ದಾರ್ ವೈ.ರವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣ ರೆಡ್ಡಿ, ಮುದ್ದೇನಹಳ್ಳಿಯ ಸತ್ಯಸಾಯಿ ಸರಳ ಆಸ್ಪತ್ರೆಯ ಮುಖ್ಯಸ್ಥ ಗೋವಿಂದರೆಡ್ಡಿ, ಗುಡಿಬಂಡೆ ತಾಲ್ಲೂಕಿನ ಮುಖಂಡ ಕೃಷ್ಣೇಗೌಡ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್‍ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ, ಪುರಸಭೆ ಅಧ್ಯಕ್ಷೆ ರೇಷ್ಮಾಬಾನುನಯಾಜ್, ಉಪಾಧ್ಯಕ್ಷ ಎ.ಶ್ರೀನಿವಾಸ್ ಹಾಗು ಆಸ್ಪತ್ರೆಗಳ ಮುಖ್ಯಸ್ಥರು ಭಾಗಿಯಾಗಿದ್ದರು.

For Daily Updates WhatsApp ‘HI’ to 7406303366

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!
Exit mobile version