Bagepalli : ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ (Government First Grade College) ಬುಧವಾರ ರಾಜ್ಯ ಗೃಹ ಮಂಡಲಿಯ ಹಾಗೂ ತಾಲ್ಲೂಕು ಅಧಿಕಾರಿಗಳ ಜೊತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S N Subbareddy) ಭೇಟಿ (Visit) ನೀಡಿ ಕಾಲೇಜಿನ ಅಭಿವೃದ್ಧಿಯ (Development) ಕುರಿತು ಚರ್ಚೆ ಮಾಡಿ, ತಡೆಗೋಡೆ, ಕೊಠಡಿಗಳು, ಹೈಟೆಕ್ ಗ್ರಂಥಾಲಯ, ಶೌಚಾಲಯ, ಸಭಾಭವನ ಸೇರಿದಂತೆ ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕಾರ್ಯಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು “ಕ್ಷೇತ್ರದ ಬಾಗೇಪಲ್ಲಿ, ಗುಡಿಬಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಂಶುಪಾಲರಿಂದ ಮಾಹಿತಿ ಸಂಗ್ರಹಿಸಲಾಗಿದ್ದು ಕಾಲೇಜುಗಳಿಗೆ ತಡೆಗೋಡೆ, ಉದ್ಯಾನ, ಸಭಾಂಗಣ, ಆಟದ ಮೈದಾನ ಮತ್ತು ಸಭಾಭವನ ನಿರ್ಮಿಸಲಾಗುವುದು. ಚೇಳೂರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಹಾಗೂ ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ತರಗತಿ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಮನವಿ ಮಾಡಲಾಗುವುದು” ಎಂದು ತಿಳಿಸಿದರು.
ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ್, ಕರ್ನಾಟಕ ಗೃಹ ಮಂಡಲಿಯ ಕಾರ್ಯನಿರ್ವಾಹಕ ಅನಿಲ್ ಸಾಕೊಳ್ಳಿ, ಸಹಾಯಕ ಇಂಜಿನಿಯರ್ ಸೌಮ್ಯ, ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ, ಹಿರಿಯ ಗ್ರಂಥಪಾಲಕ ಡಾ.ಸಿ.ಎಸ್.ವೆಂಕಟರಾಮರೆಡ್ಡಿ, ಪ್ರಾಧ್ಯಾಪಕರಾದ ನಾಗರಾಜ್, ಮನೋರಂಜನ್, ಶಾಜುನ್ನೀಸಾ, ಪೂರ್ಣಂಕುವರ್, ಸಿಬ್ಬಂದಿ ಪಠಾಣ್, ಗಂಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
[…] […]