Bagepalli : ಬಾಗೇಪಲ್ಲಿ ಪಟ್ಟಣದ ಸಿವಿಲ್ ನ್ಯಾಯಾಲಯದ (Civil Court) ಮುಂಭಾಗ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ (National Voters Day) ಸಿವಿಲ್ ನ್ಯಾಯಾಧೀಶ ಎಸ್.ಎಂ. ಅರುಟಗಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶರು ” ಸಂವಿಧಾನದಡಿ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದ್ದು ಆಸೆ, ಆಮಿಷಕ್ಕೆ ಒಳಗಾಗದೆ ನಿರ್ಭಯವಾಗಿ ಮತ ಚಲಾಯಿಸಿ ಜನಪರ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ತೆರಿಗೆ ರೂಪದಲ್ಲಿ ಚುನಾವಣೆಗಳಿಗೆ ಖರ್ಚಾಗುವ ಕೋಟ್ಯಂತರ ರೂಪಾಯಿಯನ್ನು ಜನರ ಮೇಲೆ ವಿಧಿಸುತ್ತಾರೆ. 5 ವರ್ಷಗಳ ಕಾಲ ಜನಪರ ಕೆಲಸ ಮಾಡುವ ಸರ್ಕಾರಗಳ ಯೋಜನೆಗಳನ್ನು ತಲುಪಿಸುವ ನಾಯಕರಿಗೆ ಮತ ನೀಡಬೇಕು” ಎಂದು ತಿಳಿಸಿದರು.
ಹಿರಿಯ ವಕೀಲ ನರಸಿಂಹಾರೆಡ್ಡಿ, ಸಹಾಯಕ ಸರ್ಕಾರಿ ಅಭಿಯೋಜಕ ಸಿ.ಎನ್. ಚಿನ್ನಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಮುಸ್ತಾಕ್ ಅಹಮದ್, ಕಾರ್ಯದರ್ಶಿ ವಿ. ವೆಂಕಟೇಶ್, ವಕೀಲರಾದ ಕರುಣಾಸಾಗರ ರೆಡ್ಡಿ, ಎ.ಜಿ. ಸುಧಾಕರ್, ಎ. ನಂಜುಂಡಪ್ಪ, ಫಯಾಜ್ ಅಹಮದ್, ಚಂದ್ರಶೇಖರ್, ನಾಗಭೂಷಣ ನಾಯಕ್, ಬಾಲುನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.