Gudibande : ಗುಡಿಬಂಡೆಯ ಬೀಚಗಾನಹಳ್ಳಿ ಕ್ರಾಸ್ (Beechaganahalli Cross) ಆದರ್ಶ ವಿದ್ಯಾಲಯದಲ್ಲಿ (Adarsha Vidyalaya) 2022-23ನೇ ಸಾಲಿನ 6ನೇ ತರಗತಿಗೆ ದಾಖಲಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗಾಗಿ ಜನವರಿ 24ರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಗತ್ಯ ದಾಖಲೆಗಳೊಂದಿಗೆ ಬೀಚಗಾನಹಳ್ಳಿ ಕ್ರಾಸ್ ಆದರ್ಶ ವಿದ್ಯಾಲಯ ಅಥವಾ ಯಾವುದೇ ಸೈಬರ್ ಸೆಂಟರ್‌ಗಳಲ್ಲಿ ಫೆ.9 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಶಿಕ್ಷಕ ಡಿ.ಎಸ್.ಲಕ್ಷ್ಮಿನರಸಿಂಹಗೌಡ ದೂರವಾಣಿ ಸಂಖ್ಯೆ 9141016770 ಸಂಪರ್ಕಿಸಬಹುದು ಎಂದು ಮುಖ್ಯ ಶಿಕ್ಷಕಿ ಉಮಾ ತಿಳಿಸಿದ್ದಾರೆ.