Home News Bagepalli ಶೀಘ್ರವೇ ಪೌರಕಾರ್ಮಿಕರಿಗೆ ನಿವೇಶನ

ಶೀಘ್ರವೇ ಪೌರಕಾರ್ಮಿಕರಿಗೆ ನಿವೇಶನ

0
Bagepalli Poura Karmik Diwas

Bagepalli : ಬಾಗೇಪಲ್ಲಿ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಗುರುವಾರ ಪೌರಕಾರ್ಮಿಕರ ದಿನಾಚರಣೆ (Poura Karmik Diwas) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ “ಪಟ್ಟಣದಲ್ಲಿ ಸ್ವಚ್ಛತೆ ಮಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಲುಸುರಕ್ಷಿತವಾಗಿ ಇರಲು ಮುಖಗವಸು, ಕೈಗವಸು, ಕಾಲುಗಳಿಗೆ ಶೂ ಧರಿಸಬೇಕು. ಪೌರಕಾರ್ಮಿಕರಿಗೆ ನಿವೇಶನ, ವಿಧವೆಯರಿಗೆ ₹25ಸಾವಿರ, ಯುಪಿಎಸ್, ಸೂರು, ಕುಡಿಯುವ ನೀರಿನ ಯಂತ್ರ ವಿತರಿಸಲಾಗುವುದು. ಪೌರಕಾರ್ಮಿಕರ ಮಕ್ಕಳು ಐಎಎಸ್, ಐಪಿಎಸ್, ಕೆಎಎಸ್ ಉನ್ನತ ಹುದ್ದೆ ಪಡೆಯಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಅಧಿಕಾರಿಗಳಾದ ಶ್ರೀಧರ್, ಅತಾವುಲ್ಲಾ, ಅರುಣ್, ಪುರಸಭಾ ಉಪಾಧ್ಯಕ್ಷೆ ಸುಜಾತಾನಾಯ್ಡು, ಸದಸ್ಯರಾದ ಎ.ನಂಜುಂಡಪ್ಪ, ಶ್ರೀನಿವಾಸರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version