Bagepalli : ದಿ.ಗಣಿತ ಶಿಕ್ಷಕ ಬಿ.ವಿ.ಚಂದ್ರಶೇಖರ್ ಅವರ 5ನೇ ವರ್ಷದ ಸವಿನೆನಪಿನಲ್ಲಿ ಬಾಗೇಪಲ್ಲಿ ಪಟ್ಟಣದ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ (Quiz) ನಡೆಸಲಾಯಿತು. 2022-23ನೇ ಸಾಲಿನಲ್ಲಿ ಎಸ್ಎಸ್ಎಲ್‌ಸಿಯ ಗಣಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಣ್ಯರು ದಿ.ಬಿ.ವಿ.ಚಂದ್ರಶೇಖರ್ ಅವರ ಪತ್ನಿ ಕೆ.ಎಸ್.ಪದ್ಮಾ ಶೇಖರ್ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮ್ “ಕೆಲ ಶಿಕ್ಷಕ, ಶಿಕ್ಷಕಿಯರು ಬೋಧಿಸುವ ಬೋಧನಾ ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತವಾಗಿ ಉಳಿಯಲಿದೆ. ಅದೇ ರೀತಿ ಶಾಲೆಯ ಗಣಿತ ಶಿಕ್ಷಕ ದಿ. ಬಿ.ವಿ.ಚಂದ್ರಶೇಖರ್ ಅವರು ಗಣಿತ ವಿಷಯವನ್ನು ಸುಲಭ ಹಾಗೂ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೆಂಕಟೇಶ್, ಎನ್.ನಾಗರಾಜು, ನಿವೃತ್ತ ಯೋಧ ಅಮರನಾಥ ಬಾಬು, ಶಿಕ್ಷಕರಾದ ಈಶ್ವರಪ್ಪ, ಕೆ.ವಿ.ಶ್ರೀನಿವಾಸ್, ಬಾಣಾಲಪಲ್ಲಿ ಶ್ರೀನಿವಾಸ್, ಬಿ.ಎಸ್.ಕೃಷ್ಣ, ಶಿಕ್ಷಕಿ ಲಕ್ಷ್ಮೀದೇವಮ್ಮ ಮತ್ತಿತರರು ಹಾಜರಿದ್ದರು.