Chelur, Bagepalli : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (Shri Kshetra Dharmasthala Rural Development Project – SKDRDP) ವತಿಯಿಂದ ಚೇಳೂರು ತಾಲ್ಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯಿತಿ ಮಾಚನಪಲ್ಲಿ ನಾಗನಕುಂಟೆಯಲ್ಲಿಏರ್ಪಡಿಸಿದ್ದ ’ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ನಾಗನಕುಂಟೆ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ತಹಶೀಲ್ದಾರ್ ದಿವಾಕರ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ಧಾರ್ “ತಾಲ್ಲೂಕಿನ ಜನ ಅಂತರ್ಜಲ ಮಟ್ಟ ಕುಸಿತದಿಂದ ಅನೇಕ ಗಂಭೀರ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಕೆಲಸ ಮೆಚ್ಚುವಂತದ್ದು” ಎಂದು ಹೇಳಿದರು.
ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಶ್ರೀಕಾಂತ್, ಪಾಳ್ಯಕೆರೆ ಗ್ರಾ.ಪಂ.ಅಧ್ಯಕ್ಷ ಎಂ.ವಿ.ರಮೆಶ್, ಚೇಳೂರು ಉಪ-ತಹಶೀಲ್ದಾರ್ ಎಚ್.ಎಸ್. ರವಿಶಂಕರ್ , ಗ್ರಾಮಲೆಕ್ಕಾಧಿಕಾರಿ ಎನ್.ರಮಾನಂದ್, ತಾಲ್ಲೂಕು ಧರ್ಮಸ್ಥಳ ಯೋಜನಾಧಿಕಾರಿ ಗಿರೀಶ್, ತಾಲ್ಲೂಕು ಕೃಷಿ ಅಧಿಕಾರಿ ಧನಂಜಯಮೂರ್ತಿ,ಹೋಬಳಿ ಮೇಲ್ವಿಚಾರಕ ಅಭೀಷೇಕ್, ಗ್ರಾ.ಪಂ.ಸದಸ್ಯರಾದ ಅರುಣಮ್ಮ, ಈಶ್ವರಪ್ಪ,ಗ್ರಾಮದ ಹಿರಿಯರಾದ ಪಟೇಲ್ ವೆಂಕಟ್ರಾಮರೆಡ್ಡಿ, ಮಾಚನಪಲ್ಲಿ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರಾದ ಮಂಜುನಾಥರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.