Bagepalli : ಬಾಗೇಪಲ್ಲಿ ಸತ್ಯಸಾಯಿ ಧರ್ಮಶಾಲಾ (Sathya Sai Dharmashala) ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ (Vishwakarma Jayanthi) ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವಕರ್ಮ ಸಮುದಾಯ ಸಂಘದ ಅಧ್ಯಕ್ಷ ಪಿ.ಜಿ.ಶಿವಶಂಕರಾಚಾರಿ ಮಾತನಾಡಿದರು.
ಅನಾದಿ ಕಾಲದಿಂದಲೂ ವಿಶ್ವಕರ್ಮ ಸಮುದಾಯದವರು ತಮ್ಮ ಮೂಲವೃತ್ತಿಯಲ್ಲಿ ಕರಕುಶಲತೆಯನ್ನು ಬಳಕೆ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಇಂದಿಗೂ ಸಹ ಸಮಾಜದಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡಿಲ್ಲ. ಇದರಿಂದ ಕೆಲವರು ಆರ್ಥಿಕತೆಯಲ್ಲಿ ಹಿಂದುಳಿದಿದ್ದಾರೆ. ವಿಶ್ವಕರ್ಮ ಸಮುದಾಯದವರು ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಆರ್ಥಿಕವಾಗಿ ಬಲಿಷ್ಠಗೊಳ್ಳಬೇಕು ಎಂದು ತಿಳಿಸಿದರು.
ಸತ್ಯಸಾಯಿ ಧರ್ಮಶಾಲಾ ಧರ್ಮದರ್ಶಿ ಕೆ.ಎಂ.ನಾಗರಾಜ್, ಅಶೋಕ್ ಕುಮಾರ್, ಶ್ರೀನಿವಾಸಾಚಾರಿ, ವಿಜಯ್ ಕುಮಾರ್, ಕೆ.ಎಲ್.ಸುಬ್ಬರತ್ನಮ್ಮ, ಅನಿತ, ವೆಂಕಟರವಣಾಚಾರಿ, ವೀರಾಚಾರಿ, ರಘುನಾಥ ರೆಡ್ಡಿ, ಅಮರನಾಥ ಬಾಬು,ಶೇಷುಚಾರಿ,ಮನೋಹರಚಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur