Home News Chelur ಚೀಟಿ ಮೂಲಕ ಗ್ರಾ.ಪಂ ಅಧ್ಯಕ್ಷರ ಆಯ್ಕೆ

ಚೀಟಿ ಮೂಲಕ ಗ್ರಾ.ಪಂ ಅಧ್ಯಕ್ಷರ ಆಯ್ಕೆ

0
Chelur Pulagal President Election

Chelur : ತೆರವಾದ ಚೇಳೂರು ತಾಲ್ಲೂಕಿನ ಪುಲಗಲ್ (Pulagal) ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ (President Election) ಎಂ.ಟಿ.ವೆಂಕಟರಮಣ ಆಯ್ಕೆಯಾಗಿದ್ದಾರೆ.

ಕೆ.ಸುಧಾಕರರೆಡ್ಡಿ ಮತ್ತು ಎಂ.ಟಿ. ವೆಂಕಟರಮಣ ಅಧ್ಯಕ್ಷ ಸ್ಥಾನಕ್ಕೆನಾಮಪತ್ರ ಸಲ್ಲಿಸಿದ್ದರು. ಪಂಚಾಯಿತಿಯಲ್ಲಿ 14 ಸದಸ್ಯರಿದ್ದು, ಕೆ.ಸುಧಾಕರರೆಡ್ಡಿ ಅವರಿಗೆ ಏಳು ಹಾಗೂ ಎಂ.ಟಿ.ವೆಂಕಟರಮಣ ಏಳು ಸದಸ್ಯರು ಮತ ಹಾಕಿದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಚೇಳೂರು ತಹಶೀಲ್ದಾರ್ ಎ.ವಿ.ಶ್ರೀನಿವಾಸಲು ನಾಯುಡು ಮತ ಸಮಾನವಾದಾಗ ಎಲ್ಲರ ಒಪ್ಪಿಗೆಯಂತೆ ಚೀಟಿ ಮೂಲಕ ಅಧ್ಯಕ್ಷರ ಆಯ್ಕೆಗೆ ನಿರ್ಧರಿಸಲಾಯಿತು.

ಈ ಸಂಧರ್ಭದಲ್ಲಿ ಗ್ರಾ.ಪಂ ಪಿಡಿಓ ಶ್ರೀನಿವಾಸ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳು ಹಾಜರಿದ್ದರು

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version