Chelur: ಚೇಳೂರು ತಾಲ್ಲೂಕಿನ ಚೀಲಕಲನೇರ್ಪು ಗ್ರಾಮ ಪಂಚಾಯಿತಿ (Chilkalanerpu Gram Panchayat Election) ಅಧ್ಯಕ್ಷರ ಸ್ಥಾನಕ್ಕೆ ಮಿಂಚನಹಳ್ಳಿ ಗ್ರಾಮದ ಜಯಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೊಸಹುಡ್ಯ ಗ್ರಾಮದ ಆರ್.ಟಿ. ಪ್ರಸಾದ್ ರೆಡ್ಡಿ ರಾಜೀನಾಮೆ ನೀಡಿದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಯಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು, ಮತಸಮರವೇ ಇಲ್ಲದೆ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಈ ಚುನಾವಣೆಗೆ ತಹಶೀಲ್ದಾರ್ ಶ್ರೀನಿವಾಸಲು ನಾಯ್ಡು ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದರು.
ನಂತರ ಮಾತನಾಡಿದ ಜಯಮ್ಮ, “ಮಾಜಿ ಅಧ್ಯಕ್ಷ ಪ್ರಸಾದ್ ರೆಡ್ಡಿ, ಶಾಸಕ ಬಿ.ಎನ್. ರವಿಕುಮಾರ್ ಮತ್ತು ಸದಸ್ಯರ ಸಹಕಾರದಿಂದ ನಾನು ಆಯ್ಕೆಯಾಗಿದ್ದೇನೆ. ಎಲ್ಲರ ವಿಶ್ವಾಸದೊಂದಿಗೆ ಪಕ್ಷಾತೀತವಾಗಿ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ,” ಎಂದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಆರ್.ಟಿ. ಪ್ರಸಾದ್ ರೆಡ್ಡಿ, ಜಿ.ಪಂ ಮಾಜಿ ಸದಸ್ಯ ನಂದನವನ ಶ್ರೀರಾಮ ರೆಡ್ಡಿ, ಉಪಾಧ್ಯಕ್ಷೆ ಭಾಗ್ಯಮ್ಮ ರಾಮಾಂಜನೇಯ, ಬಳ್ಳಾರಿ ನರಸಿಂಹ, ಅನಿಲ್ ಕುಮಾರ್, ಶ್ರೀನಾಥ್ ರೆಡ್ಡಿ, ನರೇಶ್ ಎಂ.ಎಸ್, ಚೇರ್ಮನ್ ಅಂಜನೆಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.