Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೋಯ್ಡಾದಿಂದ ಬೆಂಗಳೂರಿಗೆ MI ಕಂಪನಿಯ 6,660 ಮೊಬೈಲ್‌ಗಳನ್ನು ಸಾಗಿಸುತ್ತಿದ್ದ ಕಂಟೇನರ್‌ನ 3 ಕೋಟಿ ರೂ. ಮೌಲ್ಯದ ಮೊಬೈಲ್‌ಗಳು ಕಳ್ಳತನವಾಗಿವೆ.
ನ. 22 ರಂದು (ಎನ್‌ಎಲ್ 01 ಎಎಫ್ 2743) ನಂಬರ್ ಕಂಟೇನರ್ ದೆಹಲಿಯಿಂದ ಹೊರಟು, ಚಿಕ್ಕಬಳ್ಳಾಪುರ ತಾಲ್ಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಗ್ರಾಮ ಕ್ರಾಸ್ ಬಳಿ ನಿಲ್ಲಿಸಿ, ಚಾಲಕ ರಾಹುಲ್ ನಾಪತ್ತೆಯಾಗಿದ್ದಾನೆ. ನಿಗದಿತ ಸಮಯಕ್ಕೆ ಕಂಟೇನರ್ ತಲುಪದ ಕಾರಣ, ಕಂಪನಿ ಸಿಬ್ಬಂದಿ ಜಿಪಿಎಸ್ ಮೂಲಕ ಸ್ಥಳ ಪತ್ತೆ ಹಚ್ಚಿ, ಪೆರೇಸಂದ್ರ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರ ಪ್ರಕಾರ, ಕಂಟೇನರ್‌ನಲ್ಲಿದ್ದ ಶೇ 80–90% ಮೊಬೈಲ್‌ಗಳು ಕಳುವಾಗಿದ್ದು, ಕಂಪನಿ ಚಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದೆ. ಕಂಟೇನರ್ ಅನ್ನು ಕಂಪನಿ ಸುಪರ್ದಿಗೆ ನೀಡಲಾಗಿದ್ದು, ರಾಹುಲ್ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.