Chikkaballapur : ಕಳೆದ 3 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಚಿಕ್ಕಬಳ್ಳಾಪುರ ನಗರದ APMC ಮಾರುಕಟ್ಟೆ, ತಾತ್ಕಾಲಿಕ ಹೂವಿನ ಮಾರುಕಟ್ಟೆ (Flower Market) ಯಲ್ಲಿ ನೀರು ನಿಂತು ಕೆಸರು ರಾಢಿಯಾಗಿದೆ.
APMC ಮಾರುಕಟ್ಟೆಗೆ ಪ್ರತಿದಿನ ಲೋಡ್ ಗಟ್ಟಲೆ ಟೊಮೆಟೊ ಹಾಗೂ ಇತರೆ ತರಕಾರಿಗಳನ್ನು ರೈತರು ಮಾರಾಟಕ್ಕೆ ತರುತ್ತಿದ್ದು, ಹರಾಜಿನ ನಂತರ ವಾಹನಗಳಿಗೆ ಲೋಡ್ ಮಾಡಿ ಬೇರೆ ರಾಜ್ಯಗಳಿಗೆ ರವಾನೆ ಮಾಡಲಾಗುತ್ತದೆ. ಕಳಪೆ ಹಾಗೂ ಬೇಡದ ಹಣ್ಣುಗಳನ್ನು ಶೇಖರಣೆ ಮಾಡುವ ಸೌಲಭ್ಯ ಇಲ್ಲದೆ ಚರಂಡಿ, ರಸ್ತೆಯಲ್ಲಿ ಹಾಕಲಾಗುತ್ತದೆ. ಕಳೆದ 3 ದಿನಗಳಿಂದ ಮಳೆ ಬೀಳುತ್ತಿರುವುದರಿಂದ ಕೊಚ್ಚೆಯೊಂದಿಗೆ ಕೊಳೆತ ಹಣ್ಣುಗಳು ದುರ್ನಾತ ಬೀರುತ್ತಿದೆ.
ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರಿವ ತಾತ್ಕಾಲಿಕ ಹೂವಿನ ಮಾರುಕಟ್ಟೆ ಮಳೆಯಿಂದಾಗಿ ಕುಂಟೆಯಾಗಿ ಮಾರ್ಪಟ್ಟಿದೆ. ಹೂ ಹೊತ್ತು ತಂದಿದ್ದ ರೈತರು ಹೂ ಸಂಗ್ರಹಿಸಲು ಸರಿಯಾದ ಸೌಕರ್ಯವಿಲ್ಲದೆ ಮತ್ತು ಖರೀದಿದಾರರು ಕೊಳ್ಳದೆ ನೀರು ತುಂಬಿದ್ದ ಮರುಕಟ್ಟೆಯಲ್ಲಿಯೇ ಚೆಲ್ಲಿ ವಾಪಸಾಗಿದ್ದಾರೆ.