Chikkaballapur : ಚಿಕ್ಕಬಳ್ಳಾಪುರ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆರ್ಯವೈಶ್ಯ ಮಹಾಸಭಾ ವತಿಯಿಂದ ಭಾನುವಾರ ಆರ್ಯವೈಶ್ಯ ಜನಜಾಗೃತಿ ಸಮಾವೇಶ (Aryavaishya Jana Jagruthi Samavesha) ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯ ಅಧ್ಯಕ್ಷ ಆರ್.ಪಿ ರವಿಶಂಕರ್ “ರಾಜ್ಯದ ಮೂಲೆ ಮೂಲೆಗಳಲ್ಲಿ ಇರುವ ಸಮಾಜದ ಜನರನ್ನು ಸಂಘಟಿಸುವುದೇ ಮಹಾಸಭಾ ಉದ್ದೇಶವಾಗಿದ್ದು 1987ರಿಂದ 2009ರವರೆಗೆ 21,600 ಇದ್ದ ಆರ್ಯವೈಶ್ಯ ಮಹಾಸಭಾದ ಸದಸ್ಯರ ಸಂಖ್ಯೆ 2009ರ ನವೆಂಬರ್‌ನಿಂದ ಇಲ್ಲಿಯವರೆಗೆ 73 ಸಾವಿರ ಆಗಿದ್ದು ಸಮುದಾಯ ಸಂಘಟನೆ ಆಗುತ್ತಿದೆ. ಮಹಾಸಭೆಯು ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವಾಗುತ್ತಿದೆ” ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಆರ್ಯವೈಶ್ಯ ಮಹಾಸಭಾ ಗೌರವಾಧ್ಯಕ್ಷ ಡಿ.ಎಸ್.ನಂಜುಂಡರಾಮಯ್ಯ ಶೆಟ್ಟಿ, ಅಧ್ಯಕ್ಷ ಬಿ.ಆರ್.ಶ್ರೀನಿವಾಸಮೂರ್ತಿ, ರಜತ್ ಕೆ.ವಿ.ಶಿವಕುಮಾರ್, ಮಾನಂದಿ ಸುರೇಶ್, ಎ.ಎನ್.ರಮೇಶ್ ಗುಪ್ತ ಹಾಗೂ ಸಮುದಾಯದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.