Gauribidanur : ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ (Adichunchanagiri University, Nagamangala, Mandya) ನಡೆದ ರಾಜ್ಯ ಮಟ್ಟದ 2021-22 ನೇ ಸಾಲಿನ ಭರತನಾಟ್ಯ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತಿನಿಧಿಸಿದ ಗೌರಿಬಿದನೂರು ತಾಲ್ಲೂಕಿನ ಭರತನಾಟ್ಯ ಕಲಾವಿದೆ ಕುಮಾರಿ ಹರಿಪ್ರಿಯಾ (Bharatanatyam Artist Kum. Haripriya Hosamani) ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
‘ ಗೌರಿಬಿದನೂರು ನಗರದ ದಿಕ್ಸೂಚಿ ನಾಟ್ಯಾಲಯದಲ್ಲಿ ನೃತ್ಯ ಶಿಕ್ಷಕಿಯಾದ ದಿವ್ಯಶಿವನಾರಾಯಣರವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಶಾಲಾ ಹಂತದಿಂದಲೇ ಭರತನಾಟ್ಯ ನೃತ್ಯವನ್ನು ಆಸಕ್ತಿಯಿಂದ ಕಲಿತು ಅಭ್ಯಾಸ ಮಾಡಿದ್ದೇನೆ. ಗೌರಿಬಿದನೂರು ತಾಲ್ಲೂಕಿನ ಕೀರ್ತಿ ರಾಷ್ಟ್ರಮಟ್ಟದಲ್ಲಿ ಪಸರಿಸುವ ಕನಸು ನನ್ನದಾಗಿದ್ದು ಪ್ರತಿ ಹಂತದಲ್ಲೂ ಆಸಕ್ತಿ ಮತ್ತು ಅವದಾನದಿಂದ ಕಲಿತು ಪ್ರದರ್ಶನಕ್ಕೆ ಮುಂದಾಗುತ್ತೇನೆ. ’ ಎಂದು ಹರಿಪ್ರಿಯಾ ತಿಳಿಸಿದ್ದಾರೆ.