Home Chikkaballapur 100% ಲಸಿಕೆ ಸಾಧಿಸಿದ ಮೊದಲ ಜಿಲ್ಲೆಯಾಗುವುದೇ ಚಿಕ್ಕಬಳ್ಳಾಪುರ?

100% ಲಸಿಕೆ ಸಾಧಿಸಿದ ಮೊದಲ ಜಿಲ್ಲೆಯಾಗುವುದೇ ಚಿಕ್ಕಬಳ್ಳಾಪುರ?

0
Chikkaballapur Covid Vaccination Progress

Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಶೇ 100 ರಷ್ಟು ಜನರಿಗೆ Covid-19 Vaccine ಮೊದಲ ಡೋಸ್ ನೀಡಲಾಗಿದೆ ಹಾಗೂ ಎರಡನೇ Dose ಲಸಿಕೆ ನೀಡುವುದರಲ್ಲಿ 91.4 % ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha) ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ 2021 ಜನವರಿ 16 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ಜಿಲ್ಲಾಡಳಿತ ಪ್ರಾರಂಭಿಸಿತ್ತು. ಜಿಲ್ಲೆಯಾದ್ಯಂತ ಹಲವು ಬಾರಿ ಲಸಿಕಾ ಅಭಿಯಾನ ಹಾಗೂ ಲಸಿಕಾ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾದ್ಯಂತ 10,19,983 ಜನರಿಗೆ ಮೊದಲನೇ ಡೋಸ್ ಲಸಿಕೆಯನ್ನು ನೀಡುವ ಮೂಲಕ ಶೇ 100 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ ಎರಡನೇ ಡೋಸ್ ಲಸಿಕೆ ಪಡೆಯಲು 8,84,568 ಜನರು ಅರ್ಹರಾಗಿದ್ದು, ಈ ಪೈಕಿ ಜನವರಿ 19 ರವರೆಗೆ 8,69,255 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು ಬಾಕಿ ಇರುವ 15,313 ಜನರಿಗೆ ಒಂದೆರೆಡು ದಿನಗಳಲ್ಲಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಕೂಡಲೇ ಸಮೀಪದ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಎರಡೂ ಡೋಸ್ ಲಸಿಕೆ ಪಡೆಯುವಲ್ಲಿ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ 100% ಪ್ರಗತಿ ಸಾಧಿಸಿದ ಮೊದಲ ಜಿಲ್ಲೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version