21.4 C
Bengaluru
Friday, December 6, 2024

January 5 ರಂದು ವಿದ್ಯುತ್ ವ್ಯತ್ಯಯ

- Advertisement -
- Advertisement -

Chikkaballapur District : ಚಿಕ್ಕಬಳ್ಳಾಪುರ ವಿಭಾಗದ 66:11 ಕೆ.ವಿ ಉಪ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಫೀಡರ್‌‌ಗಳಲ್ಲಿ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಜನವರಿ 5 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು BESCOM ತಿಳಿಸಿದೆ.

ಚಿಕ್ಕಬಳ್ಳಾಪುರ

Chikkaballapur : ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ಚಿಕ್ಕಬಳ್ಳಾಪುರ ನಗರದ ಎಂ.ಜಿ. ರಸ್ತೆ, ಬಿ.ಬಿ. ರಸ್ತೆ, ವಾಪಸಂದ್ರ, ಪ್ರಶಾಂತನಗರ, ಗ್ಯಾರೇಜ್ ರಸ್ತೆ, ಶಿಡ್ಲಘಟ್ಟ ರೋಡ್, ಬೈಪಾಸ್, ಹುನೇಗಲ್, ಚಿತ್ರಾವತಿ, ಹೊನ್ನೇನಹಳ್ಳಿ, ಹಾರೋಬಂಡೆ, ಗುಂತಪ್ಪನಹಳ್ಳಿ, ಮಂಚನಬಲೆ, ಗುಂಡ್ಲಗುರ್ಕಿ, ಕಾಮಶೆಟ್ಟಿಹಳ್ಳಿ, ವಡ್ಡರಪಾಳ್ಯ, ಅವಲಗುರ್ಕಿ, ದಿನ್ನೆಹೊಸಹಳ್ಳಿ, ಹನುಮಂತಪುರ, ಸೂಸೆಪಾಳ್ಯ, ಕವರನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಕೋಟಾಲದಿನ್ನೆ, ಹೊಸೂರು, ಸೋಮಶೆಟ್ಟಿಹಳ್ಳಿ, ಸೊನಗಾನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪೆರೇಸಂದ್ರ ವಿದ್ಯುತ್ ಉಪ ಕೇಂದ್ರದ ಎಫ್-1 ಪೈಲಗುರ್ಕಿ, ಎಫ್-15 ಶೆಟ್ಟಿಗೆರೆ ಎಫ್-13 ಹರಿಸ್ಥಳ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡಪೈಲಗುರ್ಕಿ, ಚಿಕ್ಕಪೈಲಗುರ್ಕಿ, ಸಾಮಸೇನಹಳ್ಳಿ, ಎಚ್. ಕುರುಬರಹಳ್ಳಿ, ಶೆಟ್ಟಿಗೆರೆ, ಪಿಳ್ಳಗುಂಡ್ಲಹಳ್ಳಿ, ಬಂಡಹಳ್ಳಿ, ಪಾತೂರು, ಬಿಸೆಗಾರಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದೆ.

ಗೌರಿಬಿದನೂರು

Gauribidanur : ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಗೌರಿಬಿದನೂರು ವಿದ್ಯುತ್ ಉಪ ಕೇಂದ್ರದ ಎಫ್-10 ಲೋಕಲ್ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಗೌರಿಬಿದನೂರು ನಗರ, ಮಾನಸ ಸರ್ಕಲ್, ಬಿ.ಎಚ್. ರೋಡ್, ಹಿರೇಬಿದನೂರು, ಗೊಟಕನಾಪುರ, ಮಾದವನಗರ, ನೆಹರೂಜಿ ಕಾಲೊನಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ, ಪೋತೇನಹಳ್ಳಿ, ಹಳೆಹಳ್ಳಿ, ಗೌಡಗೆರೆ, ವರವಣಿ, ಕಮಲಾಪುರ, ಕದಿರದೇವರಹಳ್ಳಿ, ಪಿಂಜಾರಲಹಳ್ಳಿ, ಚಿಕ್ಕಹೊಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿಧುರಾಶ್ವತ್ಥ ಉಪ ವಿದ್ಯುತ್ ಕೇಂದ್ರದ ಎಫ್-12 ವಿಧುರಾಶ್ವತ್ಥ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ, ಚಿಕ್ಕಕುರುಗೋಡು, ಎಚ್. ನಾಗಸಂದ್ರ, ಕದಿರೇನಹಳ್ಳಿ, ಹಾಲಗಾನಹಳ್ಳಿ, ಚಂದನದೂರು, ಕುಡುಮಲಕುಂಟೆ, ದೊಡ್ಡಕುರುಗೋಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಅಡಚಣೆಯಾಗಲಿದ್ದು ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಆನಂದ ಕುಮಾರ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!