Monday, May 27, 2024
HomeGauribidanurಗೌರಿಬಿದನೂರು ತಾಲ್ಲೂಕು ಪಡಿತರ ವಿತರಕರ ಸಮಾವೇಶ

ಗೌರಿಬಿದನೂರು ತಾಲ್ಲೂಕು ಪಡಿತರ ವಿತರಕರ ಸಮಾವೇಶ

- Advertisement -
- Advertisement -
- Advertisement -
- Advertisement -

Gauribidanur : ಗೌರಿಬಿದನೂರು ತಾಲ್ಲೂಕು ಸರ್ಕಾರಿ ಪಡಿತರ ವಿತರಕರ (Government Ration Distributor, PDS) ಸಂಘದಿಂದ ನಗರದ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಪಡಿತರ ವಿತರಕರ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ವಿ. ಶಿವಶಂಕರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯಬೆಲೆ ಅಂಗಡಿಗಳ ಆಹಾರ ವಿತರಕರಾದ ನರಸಿಂಹರೆಡ್ಡಿ, ಕೊಂಡಮ್ಮ, ಪಾರ್ಶ್ಚನಾಥಯ್ಯ, ಪದ್ಮಾವತಮ್ಮ ಹಾಗೂ ನಿವೃತ್ತ ಸಗಟು ಸೀಮೆಎಣ್ಣೆ ವಿತರಕರಾದ ಇಸ್ತೂರಿ ಆರ್. ರಂಗನಾಥ್, ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ವಿ. ಶಿವಶಂಕರ್ ” ಎಲ್ಲಾ‌ ಪಡಿತರ ವಿತರಕರು ಬದ್ಧತೆಯ ಜತೆಗೆ ಪ್ರಾಮಾಣಿಕತೆಯಿಂದ ಸರ್ಕಾರದಿಂದ ಬರುವ ಆಹಾರ ಧಾನ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಬೇಕು. ಪಡಿತರ ವಿತರಕರ ಸಮಸ್ಯೆಗಳನ್ನು ‌ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಂಬಂಧಿಸಿದ ‌ಸಚಿವರೊಂದಿಗೆ ಚರ್ಚಿಸಿ ತಕ್ಷಣ ಪರಿಹರಿಸಲು ಶ್ರಮಿಸುತ್ತೇನೆ. ರಾಜ್ಯದಲ್ಲಿ ಲಕ್ಷಾಂತರ ಪಡಿತರ ವಿತರಕರು ಪ್ರಾಮಾಣಿಕತೆಯಿಂದ ಸೇವೆ ಮಾಡುವ ಮೂಲಕ ಸಾಕಷ್ಟು ಬಡ ಕುಟುಂಬಗಳಿಗೆ ಆಸರೆಯಾಗಿದ್ದು ಪಡಿತರ ವಿತರಕರ ಹಿತ ಕಾಪಾಡಲು ಆಹಾರ ಆಯೋಗ ಬದ್ಧವಾಗಿದೆ ” ಎಂದು ತಿಳಿಸಿದರು.

ರಾಜ್ಯದಲ್ಲಿನ ಅನೇಕ ಪಡಿತರ ವಿತರಕರು ತುಂಬಾ ಸಮಸ್ಯೆ ಎದುರಿಸುತ್ತಿದ್ದು ಇದನ್ನು ಸರ್ಕಾರ ಹಾಗೂ ಆಹಾರ ಆಯೋಗ ಅರಿತು ಶೀಘ್ರ ಬಗೆಹರಿಸಬೇಕಾಗಿದ್ದೆ. ಜಿಲ್ಲೆಯಲ್ಲಿ ಒಟ್ಟು 542 ಪಡಿತರ ವಿತರಣೆ ಕೇಂದ್ರಗಳಿದ್ದು ನಿತ್ಯ ಎಲ್ಲಾ ವಿತರಕರು ಸರ್ವರ್ ಸಮಸ್ಯೆ ಎದುರಿಸುತ್ತಿದ್ದರೂ ಗ್ರಾಮೀಣ ಭಾಗದ ಬಡವರ ಕುಟುಂಬಗಳಿಗೆ ನಿಗದಿತ ಸಮಯಕ್ಕೆ ಪಡಿತರ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ವರ್ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಿ ಪ್ರತಿ ತಿಂಗಳು‌ ನಿಯಮಿತವಾಗಿ ವಿತರಕರಿಗೆ ಕೇಂದ್ರ ಮತ್ತು ರಾಜ್ಯದಿಂದ ಕಮಿಷನ್ ಹಣ ಬರುವಂತೆ ಮಾಡಬೇಕಾಗಿದೆ ಎಂದು‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ರಾಮಚಂದ್ರ ಹೇಳಿದರು.

ಆಹಾರ ಇಲಾಖೆಯ ನಿರೀಕ್ಷಕ ಜೈಪ್ರಕಾಶ್, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಆರ್. ಮದನಗೋಪಾರೆಡ್ಡಿ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ತಿಪ್ಪಾರೆಡ್ಡಿ, ಸದಾಶಿವರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಪಿ. ಶಿವಣ್ಣ, ಖಜಾಂಚಿ ವೆಂಕಟೇಶಮೂರ್ತಿ, ನಿರ್ದೇಶಕರಾದ ರಾಮನಾಥ್, ಕೆ.ವಿ. ಸುಗುಣಮ್ಮ, ಕೆ.ಎ. ರಮೇಶ್, ಎಂ. ನಾಗರಾಜ್, ಮಲ್ಲೇಶ್ವರಯ್ಯ ಮತಿತ್ತರರು ಉಪಸ್ಥಿತರಿದ್ದರು.

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!