Chikkaballapur : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ (ಹಣ್ಣು ಹಾಗೂ ಗುಲಾಬಿ) ನಾಟಿ ಮಾಡಲು ಆಸಕ್ತ ರೈತರು ನವೆಂಬರ್ 30ರ ಒಳಗೆ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು.
ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್, ಮತ್ತು ಜಾಬ್ ಕಾರ್ಡ್ ನಕಲು ಸಲ್ಲಿಸುವುದು ಅಗತ್ಯ. ಗ್ರಾಮ ಸಭೆ ಬಳಿಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಾಟಿ ಮುಂಚಿತವಾಗಿ ಮಾಡಿದಾಗ ಅಥವಾ ಈ ಮೊದಲು ಯೋಜನೆಯಡಿ ಸೌಲಭ್ಯ ಪಡೆದಿದ್ದರೆ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ತಾಲ್ಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ರೈತರು ಯೋಜನೆಯ ಲಾಭ ಪಡೆಯಲು ನಿರ್ದಿಷ್ಟ ದಿನಾಂಕದೊಳಗೆ ನೋಂದಣಿ ಮತ್ತು ನಿಯಮಾವಳಿ ಪಾಲನೆ ಮಾಡಬೇಕು.