Chikkaballapur : ಹೊಸ ವರ್ಷದ ಮೊದಲ ದಿನವಾದ ಬುಧವಾರ ಜಿಲ್ಲೆಯ (New year 2025) ಪ್ರಮುಖ ದೇವಾಲಯಗಳಲ್ಲಿ ಜನ ವಿಶೇಷ ಪೂಜೆ ನಡೆಸುವ ಮೂಲಕ ಹೊಸ ವರುಷವನ್ನು ಭರಮಾಡಿಕೊಂಡರು.
ಚಿಕ್ಕಬಳ್ಳಾಪುರದ ಈಶಾ ಕೇಂದ್ರ, ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯ, ಸುಲ್ತಾನ್‌ಪೇಟೆ ಸಮೀಪದ ಕಣಿವೆ ಬಸವಣ್ಣ ದೇವಾಲಯ, ಶ್ರೀ ಕ್ಷೇತ್ರ ಕೈವಾರದ ಅಮರನಾರೇಯಣಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇವಾಲಯ ಮತ್ತು ಸದ್ಗುರು ಯೋಗಿನಾರೇಯಣ ಮಠ ಸೇರಿದಂತೆ ಜಿಲ್ಲೆಯ ಅನೇಕ ದೇವಾಲಯಗಳಲ್ಲಿ ಜನರು ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹೊಸ ವರ್ಷಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆ ನಂದಿಬೆಟ್ಟ, ಸ್ಕಂದಗಿರಿ ಮತ್ತು ಗುಡಿಬಂಡೆಯ ಆವಲಬೆಟ್ಟಕ್ಕೆ ಡಿ.31ರ ಸಂಜೆ 6 ರಿಂದ ಜನವರಿ 1 ರ ರಾತ್ರಿ 11ರವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿತ್ತು.