Chintamani : ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ – ಪುಟ್ಟಣ್ಣಯ್ಯ (Karnataka Rajya Rait Sangha) ಬಣದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಚಿಂತಾಮಣಿ ನಗರದ BESCOM ವಿಭಾಗೀಯ ಕಚೇರಿ ಮುಂದೆ ಜಮಾವಣೆಯಾಗಿ ಘೋಷಣೆ ಕೂಗುತ್ತಾ ಪ್ರತಿಭಟನೆ (Protest) ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಗಲು 4 ಗಂಟೆ ಮತ್ತು ರಾತ್ರಿ 3 ಗಂಟೆ ಕಾಲ ದಿನಕ್ಕೆ 7 ಗಂಟೆ ನಿರಂತರ 3-ಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಎಂದು ಬೆಸ್ಕಾಂ ಆದೇಶವಿದ್ದರೂ ಅಧಿಕಾರಿಗಳು ಅದನ್ನು ಗಾಳಿಗೆ ತೂರಿ ಹತ್ತಾರು ಬಾರಿ ಕಡಿತ ಮಾಡುತ್ತಿದ್ದಾರೆ. ವಿದ್ಯುತ್ ಸರಬರಾಜಿನ ವ್ಯತ್ಯಯದಿಂದ ರೈತರು ರಾತ್ರಿ ನಿದ್ದೆಗೆಟ್ಟು ಕಾದರೂ ಕೈಗೆ ಬಂದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಅಧಿಕಾರಿಗಳ ಲಂಚ ದಾಹಕ್ಕೆ ರೈತರ ಬದುಕು ಹೈರಾಣಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಾಂ ಕಾರ್ಯಪಾಲಕ ಎಂಜನಿಯರ್ ” 8-10 ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ರೈತರಿಗೆ ಹಗಲು 4ಗಂಟೆ ಹಾಗೂ ರಾತ್ರಿ 3 ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಶಿವಾರೆಡ್ಡಿ, ರೈತ ಸಂಘದ ಕದಿರೇಗೌಡ, ರೈತ ಮುಖಂಡರಾದ ಕೋನಪ್ಪಲ್ಲಿ ಆಂಜನಪ್ಪ, ಶ್ರೀನಿವಾಸರೆಡ್ಡಿ, ಹರೀಶ್ರೆಡ್ಡಿ, ಕೃಷ್ಣಪ್ಪ, ನಾರಾಯಣಸ್ವಾಮಿ, ಕೃಷ್ಣಾರೆಡ್ಡಿ, ವೆಂಕಟರವಣಪ್ಪ ಮತ್ತಿತತರು ಭಾಗವಹಿಸಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur