Chintamani : ಚಿಕ್ಕಬಳ್ಳಾಪುರ ತಾಲ್ಲೂಕಿನ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಚಿಂತಾಮಣಿ ತಾಲ್ಲೂಕಿನ ಕಾಗತಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಅಟಲ್ ಭೂಜಲ್ ಯೋಜನೆಯಡಿ (Atal Bhujal Yojana) ರೈತರ ತರಬೇತಿ (Farmer Workshop) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಸಿ.ಮುನಿರಾಜು “ಕೃಷಿ ಇಲಾಖೆಯಿಂದ ಅಟಲ್ ಭೂಜಲ್ ಯೋಜನೆಯನ್ನು ನೀರಿನ ಮಿತ ಬಳಕೆ ಉತ್ತೇಜಿಸುವ ಸಲುವಾಗಿ 2022 ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು ಆಯ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಜಲಾನಯನ ಕಾಮಗಾರಿಗಳಾದ ಗೋಕಟ್ಟೆ, ನಾಲಾಬದು ಹಾಗೂ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಪ್ರಮುಖವಾಗಿ ನೀರಿನ ಮಿತ ಬಳಕೆಗಾಗಿ ಶೇ 90ರ ಸಹಾಯಧನದಲ್ಲಿ ಹನಿ ಮತ್ತು ತುಂತುರು ನೀರಾವರಿ ಘಟಕಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಟಲ್ ಭೂಜಲ್ ಯೋಜನೆಯ ಕೃಷಿ ಪರಿಣತರು ಶಶಿಕಾಂತ್ ವಿ., ಜಲತಜ್ಞೆ ರೂಪಶ್ರೀ ವಿ., ಉಮೇಶ್ ಆರ್.ಬಿ., ಕೃಷಿ ಇಲಾಖೆ ಸಿಬ್ಬಂದಿ, ರೈತರು ಪಾಲ್ಗೊಂಡಿದ್ದರು.