Home News Chintamani ಜೂನ್ 20 ರಿಂದ 24 ರವರೆಗೆ ವಿದ್ಯುತ್ ವ್ಯತ್ಯಯ

ಜೂನ್ 20 ರಿಂದ 24 ರವರೆಗೆ ವಿದ್ಯುತ್ ವ್ಯತ್ಯಯ

0
Power Cut BESCOM

Chintamani : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (Bescom) ಚಿಂತಾಮಣಿ ನಗರದಲ್ಲಿರುವ 66/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊಸದಾಗಿ ಲಿಂಕ್‌ಲೈನ್ ಕಾಮಗಾರಿಯನ್ನು (LinkLine Work) ಜೂನ್ 20 ಗುರುವಾರದಿಂದ 24 ರ ಸೋಮವಾರದವರೆಗೆ ನಡೆಸಲಾಗುತ್ತದೆ.

ಕಾಮಗಾರಿಯ ಅಂಗವಾಗಿ ಪ್ರಭಾಕರ ಬಡಾವಣೆ ಫೀಡರ್‌ನ ಅಂಜನಿ ಬಡಾವಣೆ, ಫಿಲ್ಟರ್‌ಬೆಡ್, ಅಶ್ವಿನಿ ಬಡಾವಣೆ, ಡೆಕ್ಕನ್ ಆಸ್ಪತ್ರೆ ರಸ್ತೆ, ಬೆಂಗಳೂರು ರಸ್ತೆ, ಅಂಜನಿ ಚಿತ್ರಮಂದಿರ ಪ್ರದೇಶ, ಪ್ರಭಾಕರ್ ಬಡಾವಣೆ, ರಾಜೀವನಗರ, ವೆಂಕಟಗಿರಿಕೋಟೆ, ಆಶ್ರಯ ಬಡಾವಣೆ, ಕೆಂಪಮ್ಮ ಬಡಾವಣೆ, ಟೀಚರ್ಸ್ ಕಾಲೋನಿ, ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಮತ್ತಿತರ ಪ್ರದೇಶಗಳಲ್ಲಿ ಜೂನ್ 20 ರಿಂದ 24 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತಿದ್ದು ವಿದ್ಯುತ್ ಗ್ರಾಹಕರು, ಸಾರ್ವಜನಿಕರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಜಿ.ಶಿವಶಂಕರ್ ಮನವಿ ಮಾಡಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version