Chintamani : ಖಾಸಗಿ ಶಾಲಾ ವಾಹನ ರಸ್ತೆ ಬದಿಯ ಗುಂಡಿಗೆ (School Van Accident) ಬಿದ್ದು 7 ಮಂದಿ ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡಿದ್ದಾರುವ ಘಟನೆ ಮಂಗಳವಾರ ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಏನಿಗದಲೆ ಬಳಿಯ ಮಿಂಚಲಹಳ್ಳಿ ಬಳಿಯಲ್ಲಿ ನಡೆದಿದೆ.
ಚಿಲಕಲನೇರ್ಪು ಗ್ರಾಮದಲ್ಲಿರುವ ಅಕ್ಷರ ದಿ.ಸ್ಕೂಲ್ ಶಾಲೆಯ ಸಿಬ್ಬಂದಿ ವಾಹನದಲ್ಲಿ ಮಂಗಳವಾರ ಸಂಜೆ ಶಾಲೆ ಮುಗಿದ ನಂತರ ವಿದ್ಯಾರ್ಥಿಗಳನ್ನು ಚಿಂತಾಮಣಿ ಕಡೆಗೆ ಬರುವ ರಸ್ತೆಯ ಗ್ರಾಮಗಳಿಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು ಘಟನೆಯಲ್ಲಿ ವಿದ್ಯಾರ್ಥಿಗಳಾದ ತ್ರಿಶಾ, ಯಶಸ್ವಿನಿ, ಮಧುಶ್ರೀ, ಜ್ಞಾನವಿ, ರತನ್, ಗಗನ್, ಸಮತಾರೆಡ್ಡಿ ಹಾಗೂ ಚಾಲಕ ಮಂಜುನಾಥರೆಡ್ಡಿ ಗಾಯಾಳುಗಳಾಗಿದ್ದಾರೆ. ಗಾಯಾಳುಗಳನ್ನು ಏನಿಗದಲೆಯ ಗ್ರಾಮಸ್ಥರು ಕೂಡಲೇ ಅಂಬ್ಯುಲೆನ್ಸ್‌ನಲ್ಲಿ ನಗರದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪೋಷಕರು ಆರೋಪಿಸಿದ್ದು ಕೆಂಚಾರ್ಲಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ವೆಂಕಟರವಣಪ್ಪ, ಸಬ್ ಇನ್‌ಸ್ಪೆಕ್ಟರ್ ಶಿವಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
