Chintamani: ಚಿಂತಾಮಣಿ ನಗರದ ವಿದ್ಯುತ್ ಉಪ ವಿಭಾಗದ F-13 ಸಪ್ತಗಿರಿ ಹಾಗೂ F-8 ಮಾರ್ಗಗಳ ಆಟೊ ರಿಕ್ಲೋಸರ್ ಮತ್ತು ಕವರ್ಡ್ ಕಂಡೆಕ್ಟರ್ ತುರ್ತು ಕಾಮಗಾರಿಯನ್ನು ಸೆ. 6 ರಿಂದ 8 ರವರೆಗೆ ಕೈಗೊಳ್ಳಲಾಗುವುದು ಎಂದು BESCOM ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮಾರ್ಗಗಳಿಂದ ವಿದ್ಯುತ್ ಪೂರೈಕೆಯಾಗುವ ಟಿಪ್ಪುನಗರ, ಚೌಡರೆಡ್ಡಿಪಾಳ್ಯ, ಅಜಾದ್ ಚೌಕ, ದೊಡ್ಡಪೇಟೆ, ಜೆ.ಜೆ. ಕಾಲೊನಿ, ಅಗ್ರಹಾರ, ಶ್ರೀಪಟಾಲಮ್ಮ ದೇವಸ್ಥಾನ, ಡೈಮಂಡ್ ಟಾಕೀಸ್ ರಸ್ತೆ, ಶ್ರೀರಾಮನಗರ, ಎಪಿಎಂಸಿ ಮಾರ್ಕೆಟ್, ರೈಲ್ವೆ ಸ್ಟೇಷನ್, ಚೇಳೂರು ರಸ್ತೆ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ (Power Cut) ಉಂಟಾಗುತ್ತದೆ. ಗ್ರಾಹಕರು ಮುಂಜಾಗ್ರತೆ ವಹಿಸಬೇಕು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್. ಜಯಂತ್ ತಿಳಿಸಿದ್ದಾರೆ.