Chintamani : ಚಿಂತಾಮಣಿ ನಗರದ ಹೊರವಲಯದಲ್ಲಿರುವ ತಾಲ್ಲೂಕಿನ ಬೂರಗಮಾಕಲಹಳ್ಳಿ (Booragamakalahalli) ಬಳಿ ಶನಿವಾರ ಕಾರು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು (Car Bike Accident) ಸಂಭವಿಸಿದ ಅಪಘಾತದಲ್ಲಿ ಸವಾರ ಚಿಂತಾಮಣಿ ನಗರದ ಅಗ್ರಹಾರದ ಫೋಟೋಗ್ರಾಫರ್ ಆನಂದ್ (53) ಮೃತಪಟ್ಟಿದ್ದಾರೆ.
ಆನಂದ್ ತನ್ನ ಮಗ ಅಭಿಜಿತ್‌ನೊಂದಿಗೆ ಶನಿವಾರ ಸಂಜೆ ಬೂರಗಮಾಕಲಹಳ್ಳಿಯ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವ ಸಮಯದಲ್ಲಿ ಅವಘಡ ನಡೆದಿದ್ದು ಹಿಂಬದಿಯಲ್ಲಿ ಕುಳಿತಿದ್ದ ಅವರ ಮಗ ಅಭಿಜಿತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಎದುರುಗಡೆಯಿಂದ ಬರುತ್ತಿದ್ದ ಕಾರು ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಾಲಾಗುತ್ತಿದೆ. ಮೃತರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ.