Home Chintamani ಕುಡಿದ ಮತ್ತಿನಲ್ಲಿ ಬಸ್ ಚಲಾಯಿಸಿ ಮೂರು ಕಾರುಗಳಿಗೆ ಡಿಕ್ಕಿ; ವ್ಯಕ್ತಿ ಸಾವು

ಕುಡಿದ ಮತ್ತಿನಲ್ಲಿ ಬಸ್ ಚಲಾಯಿಸಿ ಮೂರು ಕಾರುಗಳಿಗೆ ಡಿಕ್ಕಿ; ವ್ಯಕ್ತಿ ಸಾವು

0
Chintamani Drunk and Drive Bus Cars Accident

Chintamani : ಕುಡಿದ ಮತ್ತಿನಲ್ಲಿ Bus ಚಲಾಯಿಸಿ, ಮೂರು Car ಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತವಾಗಿರುವ (Accident) ಘಟನೆ ಚಿಂತಾಮಣಿ ನಗರದ ಹೊರವಲಯದ ಗೋಪಸಂದ್ರದ ವಿಜಯ ಕಾಲೇಜ್ ಬಳಿ ಶನಿವಾರ ರಾತ್ರಿ ನಡೆದಿದೆ.

ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು ಇತರೆ 3 ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ಬಸ್ ಅರ್ಧ ಭಾಗ ಕೆರೆ, ಅರ್ಧ ಭಾಗ ರಸ್ತೆಯಲ್ಲಿರುವಂತೆ ನಿಂತಿದೆ. ಬಸ್‌ನಲ್ಲಿ ಪ್ರಯಾಣಿಕರು ಇರಲಿಲ್ಲ.

ಡಿಕ್ಕಿ ಹೊಡೆದ ಮೊದಲ ಕಾರಿನಲ್ಲಿದ್ದ ಮಂಜು ಅಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಂತಾಮಣಿ ನಗರದಲ್ಲಿ ಮದುವೆ ಮುಗಿಸಿಕೊಂಡು ತಮ್ಮ ಸ್ವಗ್ರಾಮ ಶ್ರೀನಿವಾಸಪುರ ತಾಲ್ಲೂಕಿನ ಆಲವಾಟ ಗ್ರಾಮಕ್ಕೆ ತೆರಳುತ್ತಿದ್ದರು.

ಎರಡನೇ ಕಾರಿನಲ್ಲಿದ್ದ ಜ್ಯೋಗ್ಯಾನಹಳ್ಳಿ ಗ್ರಾಮದ ನಾರಾಯಣಸ್ವಾಮಿ, ಶೋಭಾ ಮತ್ತು ಸೋನಿಯಾ ಅವರಿಗೆ ಗಾಯವಾಗಿದ್ದು ಚಿಂತ್ಮನಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯಿತ್ತಿದ್ದಾರೆ.

ಮೂರನೇ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version