Chintamani : ಚಿಂತಾಮಣಿಯ ಸೊಣ್ಣಶೆಟ್ಟಹಳ್ಳಿ ಬಡಾವಣೆ ನಿವಾಸಿ ರಮಾದೇವಿ ಗುರುವಾರ ಸಂಜೆ ನಡೆದುಕೊಂಡು ಹೋಗುತ್ತಿದ್ದಾಗ ಕಳ್ಳರು ಹಿಂಬಾಲಿಸಿ ಕುತ್ತಿಗೆಯಿಂದ ಚಿನ್ನದ ಸರ ಕಸಿದು (Chain Snatching) ಪರಾರಿಯಾಗಿದ್ದಾರೆ.
ಬೆಂಗಳೂರಿನಲ್ಲಿರುವ ತಮ್ಮ ಪುತ್ರನ ಮನೆಗೆ ಹೋಗಿ ಗುರುವಾರ ಸಂಜೆ ಮನೆಗೆ ಒಂಟಿಯಾಗಿ ನಡೆದುಕೊಂಡು ಹೋಗುವಾಗ ದ್ವಿಚಕ್ರವಾಹನದಲ್ಲಿ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ಶ್ರೀನಿವಾಸಪುರಕ್ಕೆ ಹೋಗುವ ರಸ್ತೆ ವಿಳಾಸ ಕೇಳಿ ಮುಂದೆ ಹೋಗುವ ವೇಳೆ ಹಿಂದಿನಿಂದ ರಮಾದೇವಿಯವರ ಕುತ್ತಿಗೆಗೆ ಕೈಹಾಕಿ ಸರ ಕೀಳಲು ಯತ್ನಿಸಿದ್ದಾರೆ. ಆಗ ರಮಾದೇವಿ ಪ್ರತಿರೋಧ ತೋರಿದಾಗ ಅವರ ಮೇಲೆ ಹಲ್ಲೆ ನಡೆಸಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಾಂಗಲ್ಯಸರ 65 ಗ್ರಾಂ ತೂಕವಿತ್ತು ಎಂದು ರಮಾದೇವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ಥಳಕ್ಕೆ ಎಎಸ್‌ಪಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಮುರಳೀಧರ್, ಇನ್ಸ್‌ಸ್ಪೆಕ್ಟರ್ ವಿಜಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.