Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ (Muddenahalli) ಸತ್ಯಸಾಯಿ ಗ್ರಾಮದಲ್ಲಿ ಶುಕ್ರವಾರ ಸದ್ಗುರು ಮಧುಸೂದನ ಸಾಯಿ (Madhusudhan Sai) ಅವರ 45ನೇ ಜನ್ಮದಿನದ (Birthday) ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಈ ಸಂಧರ್ಭದಲ್ಲಿ ಮಧುಸೂದನ ಸಾಯಿ ಮಾತನಾಡಿ “ಸ್ವಾರ್ಥವಿಲ್ಲದ ಸಣ್ಣ ಕಾರ್ಯವಾದರೂ ಸರಿ, ಅದು ಮಹತ್ತರವಾದ ಫಲಿತಾಂಶಕ್ಕೆ ನಾಂದಿ ಆಗುತ್ತದೆ. ಸತ್ಕಾರ್ಯಗಳು ಎಂದೂ ವ್ಯರ್ಥವಾಗುವುದಿಲ್ಲ. ಸ್ವಾರ್ಥವಿಲ್ಲದ ಕಾರ್ಯಗಳು ಮಾನವನನ್ನು ದಿವ್ಯತ್ವಕ್ಕೆ ಏರಿಸುತ್ತದೆ. ಆಗ ಜೀವನ ಯಾತ್ರೆಯೂ ಸುಂದರವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಮಧುಸೂದನ ಸಾಯಿ ವಿರಚಿತ ಆತ್ಮಚರಿತ್ರೆ ‘Story Devine 3’ (ದಿವ್ಯಕಥಾಮೃತ) ಕೃತಿಯು ಲೋಕಾರ್ಪಣೆಗೊಂಡಿತು.ಅಮೆರಿಕದ ಹಾರ್ಡ್ ರಾಕ್ ಕೆಫೆ ಸಂಸ್ಥಾಪಕ ಐಸಾಕ್ ಟೈಗ್ರೆಟ್, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎಂ ನರಸಿಂಹಮೂರ್ತಿ ಸೇರಿದಂತೆ ದೇಶ ವಿದೇಶಗಳ ಗಣ್ಯರು, ಭಕ್ತರು, ಸತ್ಯಸಾಯಿ ಗ್ರಾಮದ ನಿವಾಸಿಗಳು, ಆಡಳಿತ ವರ್ಗದ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.