Chintamani : ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿ ಮಂಗಳವಾರ ಗಂಗಾ ಭವಾನಿ ಮಾತೆಯ 7ನೇ ವರ್ಷದ ಜಾತ್ರಾ ಮಹೋತ್ಸವ (Ganga Bhavani Jathra Mahosthava) ವಿಜೃಂಭಣೆಯಿಂದ ಜರುಗಿತು.
ಜಾತ್ರೆಯ ಪ್ರಯುಕ್ತ ಗಂಗಮ್ಮದೇವಿ ಉತ್ಸವಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ (Traditional Program) , ಸಂಪ್ರದಾಯಬದ್ದವಾದ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿತ್ತು. ತಮಟೆ, ಹಲಗೆ ವಾದ್ಯಗಳೊಂದಿಗೆ ದೇವಿಯ ಮೆರವಣಿಗೆ (Procession) ಮಾಡಲಾಯಿತು. ಮಹಿಳೆಯರು ತಂಬಿಟ್ಟಿನ ದೀಪಗಳನ್ನು ಹೊತ್ತು ಗಂಗಾಮಾತೆಗೆ ಬೆಳಗಿದರು.