Chintamani : ಚಿಂತಾಮಣಿಯ ವರದಾದ್ರಿ ಬೆಟ್ಟದ ಮೇಲಿನ ವರದಾಂಜನೇಯ ಸ್ವಾಮಿ ದೇವಾಲಯದಲ್ಲಿ (Varadanjaneya Swamy Temple) ಡಿಸೆಂಬರ್ 13, ಶುಕ್ರವಾರ, 87ನೇ ಹನುಮ ಜಯಂತಿ ಪ್ರಯುಕ್ತ ಕಡಲೆಕಾಯಿ ಜಾತ್ರೆ ನಡೆಯಲಿದೆ.
ಜಾತ್ರೆಯ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಪಂಚಾಮೃತಾಭಿಷೇಕ, ವಿಶೇಷ ಪೂಜೆ, ಮತ್ತು ವಜ್ರದ ಕಣ್ಣುಗಳ ಅಲಂಕಾರ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಮಂಗಳಾರತಿ ನಡೆಯಲಿದ್ದು, ದೇವಾಲಯಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಭಕ್ತರಿಗೆ ರಾತ್ರಿ 10 ಗಂಟೆಯವರೆಗೆ ವಿಶೇಷ ದರ್ಶನ ಮತ್ತು ಪೂಜೆಯ ವ್ಯವಸ್ಥೆ ಇರಲಿದೆ.
ಹುಣ್ಣಿಮೆ ದಿನವಾದ ನವೆಂಬರ್ 15, ಭಾನುವಾರ, ವಡಮಾಲೆ ಸೇವೆ ಹಾಗೂ ವಿಶೇಷ ಅಲಂಕಾರ ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.