Chintamani : ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆಯಲ್ಲಿ ಭಾನುವಾರ ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ನೌಕರರ ಸಮನ್ವಯ ಸಮಿತಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ಶಾಖೆಗಳ ಪದಾಧಿಕಾರಿಗಳಿಗೆ ಸಂಘಟನಾ ಕಾರ್ಯಾಗಾರ (Government SC ST Employees Workshop) ನಡೆಸಲಾಯಿತು. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಕಾಂ ಪದವಿಯಲ್ಲಿ 3 ಚಿನ್ನದ ಪದಕ ಪಡೆದಿರುವ ತಾಲ್ಲೂಕಿನ ನಾರಾಯಣಹಳ್ಳಿ ಗ್ರಾಮದ ಎನ್.ಎಂ.ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡ ಗಡ್ಡಂ ವೆಂಕಟೇಶ್ “ಸರ್ಕಾರಿ ನೌಕರರು ತಮ್ಮ ವ್ಯಾಪ್ತಿಯಲ್ಲಿ ಬರುವ ಕಾಲೋನಿ ಬಡವರ್ಗದ ಜನರ ಮಕ್ಕಳಿಗೆ ರಾತ್ರಿ ವಿದ್ಯಾಭ್ಯಾಸ, ಸಂಸ್ಕೃತಿ, ಕ್ರೀಡಾ ಚಟುವಟಿಕೆ ನೀಡುವ ಮೂಲಕ ಉನ್ನತ ಸ್ಥಾನಕ್ಕೆ ತಂದು ಭವಿಷ್ಯ ರೂಪಿಸಲು ಸಹಾಯ ಮಾಡಬೇಕು. ಬಿ.ಆರ್.ಅಂಬೇಡ್ಕರ್ ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಕಷ್ಟಕರ ಪರಿಸರವಿದ್ದರೂ ವಿದ್ಯಾಭ್ಯಾಸ ಮಾಡಿ ಪದವಿ ಪಡೆದರು. ವಿದ್ಯಾಭ್ಯಾಸ ಮಾಡಲು ಬಡವರು, ಹಿಂದುಳಿದವರು, ದೀನದಲಿತರು ಎಂಬ ಭಾವನೆ ಇರುವುದಿಲ್ಲ. ಶ್ರಮವೇ ತಮಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್ ಕುಮಾರ್, ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ತಿಪ್ಪೇಸ್ವಾಮಿ, ಕೋಲಾರ ಜಿಲ್ಲಾಧ್ಯಕ್ಷ ರಾಮಾಂಜಿ, ಶ್ರೀನಿವಾಸ, ಎಸ್.ಪ್ರದೀಪ್, ಕೆ.ಎಂ.ಶಿವಪ್ರಸಾದ್, ಮರಿಯಪ್ಪ, ಪದ್ಮಾವತಿ, ಅಲುವೇಲಮ್ಮ, ಜಿ.ಶ್ರೀನಿವಾಸ, ಸುನಿತ, ಪದ್ಮಾವತಿ, ಬಿ.ಕೆ.ರವಿ, ನಾಗರಾಜ್, ಸುಧಾ, ಡೇವಿಡ್, ನಂಜುಂಡಪ್ಪ, ಮಂಜು ಭಾರ್ಗವಿ, ಪ್ರಸಾದ್, ಶಿವಾನಂದ್, ರೇಖಾ ಉಮೇಶ್, ಗೊಲ್ಲಹಳ್ಳಿ ಶಿವಪ್ರಸಾದ್, ರತ್ನಮ್ಮ ಭಾಗವಹಿಸಿದ್ದರು.