Chintamani : 20 ವರ್ಷಗಳ ನಂತರ ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮದ ಕಲ್ಯಾಣಿ ತುಂಬಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಂಗಳವಾರ ತೆಪ್ಪೋತ್ಸವ ಆಚರಿಸದರು. ಗ್ರಾಮ ಪ್ರವೇಶ ದ್ವಾರದಲ್ಲಿ ರಸ್ತೆಗೆ ಹೊಂದಿಕೊಂಡಿರುವ ಪುರಾತನ ಕಲ್ಯಾಣಿ ಸುತ್ತಮುತ್ತಲೂ ದೀಪಾಲಂಕಾರ ಮಾಡಿ, ಶ್ರೀದೇವಿ, ಭೂದೇವಿ ಸಮೇತ ಚನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಅಲಂಕೃತ ತೆಪ್ಪದಲ್ಲಿರಿಸಿ ವಿಶಾಲವಾದ ಕಲ್ಯಾಣಿಯಲ್ಲಿ ತೆಪ್ಪವನ್ನು ಸಾರ್ವಜನಿಕರ ಸಮ್ಮುಖದಲ್ಲಿ ಸಂಚರಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ಸುಬ್ರಮಣಿ, ರೆಡ್ಡಿ, ಮಧು, ಮುಖಂಡ ಪಟೇಲ್ ಬೈರಾರೆಡ್ಡಿ, ನಾಗರಾಜರಾವ್, ಆದೇಪ್ಪನವರ ಸೀನಪ್ಪ, ನಾಗರಾಜ, ಮುನಿಯಪ್ಪ, ನಿವೃತ್ತ ಶಿಕ್ಷಕ ಅಶ್ವತ್ಥನಾರಾಯಣ, ಚಲಪತಿ, ಅಶ್ವಥ್, ಹೆಗ್ಗಡೆ, ಶ್ರೀಧರ್, ಸಾಹಿತಿ ಕಾಗತಿ ವಿ.ವೆಂಕಟರತ್ನಂ, ವಕೀಲ ಶ್ರೀನಿವಾಸನ್ ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದರು.