Home News Chintamani ಬೈಕ್‌ ಬಸ್ ಅಪಘಾತ : ಸವಾರ ಸಾವು

ಬೈಕ್‌ ಬಸ್ ಅಪಘಾತ : ಸವಾರ ಸಾವು

0
Sidlaghatta Two Wheelers Accident

Chintamani : ಚಿಂತಾಮಣಿ-ಚೇಳೂರು ರಸ್ತೆಯ ಕನಿಶೆಟ್ಟಹಳ್ಳಿ (Kanishetihalli) ರಸ್ತೆಯ ತಿರುವಿನಲ್ಲಿ ಗುರುವಾರ ರಾತ್ರಿ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ (Accident) ಹೊಡೆದ ಪರಿಣಾಮ ಬೈಕ್ ಸವಾರ ಚೇಳೂರು ತಾಲ್ಲೂಕಿನ ಮಣ್ಯಂಪಲ್ಲಿ ಗ್ರಾಮದ ಶೇಖರ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಂತಾಮಣಿಯಲ್ಲಿದ್ದ ಸ್ನೇಹಿತನ ಆಟೊ ತೆಗೆದುಕೊಂಡು ಹೋಗಲು ಸ್ನೇಹಿತನ ಜೊತೆ ಶೇಖರ್ ದ್ವಿಚಕ್ರವಾಹನದಲ್ಲಿ ಚಿಂತಾಮಣಿಗೆ ಬಂದಿದ್ದರು. ತಮ್ಮ ಗ್ರಾಮಕ್ಕೆ ವಾಪಸ್ ಹೋಗುತ್ತಿದ್ದಾಗ ಚೇಳೂರು ಕಡೆಯಿಂದ ಚಿಂತಾಮಣಿಗೆ ಬರುತ್ತಿದ್ದ ಖಾಸಗಿ ಬಸ್ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version