Chintamani : ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿ ಚಿಕ್ಕಕರಕಮಾಕಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ (KOCHIMUL) ಶನಿವಾರ ನಡೆದ ಚುನಾವಣೆಯಲ್ಲಿಅಧ್ಯಕ್ಷರಾಗಿ ಕೆ.ಮಂಜುನಾಥ್, ಉಪಾಧ್ಯಕ್ಷ ಮಾರಪ್ಪ ರೆಡ್ಡಿ, ನಿರ್ದೇಶಕರಾಗಿ ಸೌಭಾಗ್ಯ, ಮಂಜುಳಾ, ಗಂಗಾಧರ, ವಿ.ಮಂಜುನಾಥ, ಕೆ.ನರಸಿಂಹಪ, ಚಂದ್ರಪ್ಪ, ಕೆ.ಎನ್. ಗಂಗಾರಾಮ್ ಒಳಗೊಂಡ 11 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಕೆ.ಮಂಜುನಾಥ್ ” ಇತ್ತೀಚೆಗೆ ಎಲ್ಲ ಕಡೆ ಗುಣಮಟ್ಟಕ್ಕೆ ಮಾತ್ರ ಬೇಡಿಕೆ ಇದ್ದು ವೈಜ್ಞಾನಿಕವಾಗಿ ಹೈನುಗಾರಿಕೆ ಮಾಡಿದರೆ ಉತ್ತಮ ಮಾರುಕಟ್ಟೆ ಸೌಲಭ್ಯವೂ ದೊರೆಯುತ್ತದೆ , ಕೋಚಿಮುಲ್‌ನಿಂದ ಸಿಗುವ ಸೌಲಭ್ಯಗಳನ್ನು ಪಕ್ಷಾತೀತವಾಗಿ ಹಾಲು ಪೂರೈಕೆದಾರರಿಗೆ ತಲುಪಿಸಿ ಸಂಘದ ಎಲ್ಲ ನಿರ್ದೇಶಕರನ್ನು ಹಾಗೂ ಉತ್ಪಾದಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಎಲ್ಲರೂ ಒಟ್ಟಾಗಿ ಭಿನ್ನಾಭಿಪ್ರಾಯಗಳನ್ನು ತೊರೆದು ಸಂಘದ ಅಭಿವೃದ್ಧಿಗಾಗಿ ದುಡಿಯೋಣ ” ಎಂದು ಮನವಿ ಮಾಡಿದರು.
ಚುನಾವಣಾಧಿಕಾರಿ ಭಾಸ್ಕರ್ ರೆಡ್ಡಿ, ಕಾರ್ಯದರ್ಶಿ ಮಂಜುನಾಥರೆಡ್ಡಿ ಮತ್ತು ಹಾಲು ಉತ್ಪಾದಕರು ಇದ್ದರು.