Chintamani : ಲೋಕಸಭಾ ಚುನಾವಣಾ (Lokasabha Election) ಅಂಗವಾಗಿ ಏಪ್ರಿಲ್ 19 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಶಿಡ್ಲಘಟ್ಟ ರಸ್ತೆಯ ವೈ ಹುಣಸೇನಹಳ್ಳಿಯಲ್ಲಿ (Y Hunasennahalli) JDS BJP ಬಹಿರಂಗ ಸಭೆ ನಡೆಸಲಿದ್ದು ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (H D Devegowda) ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಂ.ಕೃಷ್ಣಾರೆಡ್ಡಿ “ಬಹಿರಂಗ ಸಭೆಗೆ ಚಿಂತಾಮಣಿ ತಾಲ್ಲೂಕಿನಿಂದ 10 ಸಾವಿರ ಜನ ಭಾಗವಹಿಸುತ್ತಾರೆ. ತಾಲ್ಲೂಕಿನ ಪ್ರತಿ ಪಂಚಾಯಿತಿಯಿಂದ 200 ಬೈಕ್ ಹೊರಡಲಿವೆ. ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಪರವಾಗಿ ಮತಯಾಚನೆ ನಡೆಯಲಿದೆ. ಏಪ್ರಿಲ್ 20 ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಾರೆ” ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮುಖಂಡ ಜಿ.ಎನ್.ವೇಣುಗೋಪಾಲ್, ಬೈರಾರೆಡ್ಡಿ, ರಾಜಣ್ಣ ಪಾಲ್ಗೊಂಡಿದ್ದರು.