Chintamani : ₹ 160.09 ಲಕ್ಷ ವೆಚ್ಚದಲ್ಲಿ ಚಿಂತಾಮಣಿ ನಗರದಲ್ಲಿ ಗ್ರಾಮಾಂತರ Police Station ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ನಗರ ಉಪ ವಿಭಾಗದ ಎಎಸ್‌ಪಿ ಕುಶಾಲ್ ಚೌಕ್ಸೆ ರವರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.
ನೆಲ ಅಂತಸ್ತು ಮತ್ತು ಮೊದಲ ಅಂತಸ್ತು ಸೇರಿ ಒಟ್ಟು 4041.45 ಚದರ ಅಡಿಗಳ ಗ್ರಾಮಾಂತರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದೆ. ಕಟ್ಟಡವನ್ನು 8 ತಿಂಗಳೊಳಗೆ ನಿರ್ಮಿಸಲು ಸೂಚಿಸಲಾಗಿದೆ ಎಂದು ನಗರ ಉಪ ವಿಭಾಗದ ಎಎಸ್‌ಪಿ ಕುಶಾಲ್ ಚೌಕ್ಸೆ ಹೇಳಿದರು.
ಚಿಂತಾಮಣಿ ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಮಾತನಾಡಿ,ಕಾಮಗಾರಿಯಲ್ಲಿ ಗುಣಮಟ್ಟವನ್ನು ಗುತ್ತಿಗೆದಾರರು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಜನಾರ್ದನ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.